– ಲೋಕಲ್ ಸಮಸ್ಯೆ ಇತ್ಯರ್ಥ ಎಂದ ಸತೀಶ್ ಜಾರಕಿಹೊಳಿ
ಬೆಳಗಾವಿ: ಒಂದು ವಾರದಿಂದ ರಾಜ್ಯದ ಗಮನ ಸೆಳೆದಿದ್ದ ಪಿಎಲ್‍ಡಿ ಬ್ಯಾಂಕ್ ಚುನಾವಣೆಗೆ ತೆರೆ ಬಿದ್ದಿದೆ. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ತೀವ್ರ ಕೂತುಹಲ ಕೆರಳಿಸಿದ್ದ ಸಾಹುಕಾರರ ಅಡ್ಡದ ರಣರಂಗದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಮೇಲುಗೈ ಸಾಧಿಸಿದ್ದು, ಜಾರಕಿಹೊಳಿ ಬಣಕ್ಕೆ ಹಿನ್ನಡೆಯಾಗಿದೆ.
ಗೆಲುವಿನ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಎಲ್ಲರ ಒಮ್ಮತದಿಂದ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ನನ್ನ ವಿರುದ್ಧದ ವೈಯಕ್ತಿಕ ಟೀಕೆಗಳಿಗೆ ನಾನು ಉತ್ತರ ಕೊಡಲ್ಲ. ಭಗವಂತ ಎಲ್ಲವನ್ನು ನೋಡಿಕೊಳ್ಳುತ್ತಾನೆ. ಚುನಾವಣೆಯಲ್ಲಿ ಯಾರ ಗೆಲುವು ಇಲ್ಲ. ಸೋಲು ಇಲ್ಲ. ಪಕ್ಷದ ಮುಖಂಡರ ಸಮ್ಮುಖದಲ್ಲಿ ಎಲ್ಲವೂ ಸುಖಾಂತ್ಯವಾಗಿದೆ. ಜಾರಕಿಹೊಳಿ ಸಹೋದರರೊಂದಿಗೆ ಪಕ್ಷದ ವರಿಷ್ಠರು ಮಾತನಾಡಿದ್ದಾರೆ. ನನ್ನ ಕ್ಷೇತ್ರಕ್ಕೆ ಗೆಲುವು ಆಗಿದೆ ಎಂದು ಸಂತೋಷ ಹಂಚಿಕೊಂಡರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
Advertisement
ಪಿಎಲ್‍ಡಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಿಯೂ ಮಾಧ್ಯಮಗಳ ಮುಂದೆ ಬಂದಿಲ್ಲ. ನಾನು ಎಲ್ಲಿಯೂ ಬೇರೆಯವರ ರೀತಿ ನಡೆದುಕೊಂಡಿಲ್ಲ. ಇನ್ನು ಆ ಘಟನೆಗಳ ಬಗ್ಗೆ ನಾನು ಹೆಚ್ಚು ಮಾತನಾಡಲು ಇಷ್ಟಪಡಲ್ಲ. ನಾನು ಸ್ಲಂನಲ್ಲಿಯೇ ಹುಟ್ಟಿರಬಹುದು, ಏನಾದ್ರೂ ಆಗಿರಬಹುದು. ಯಾವುದೇ ಹೇಳಿಕೆಗಳಿಗೂ ನಾನು ಕಮೆಂಟ್ ಮಾಡಲ್ಲ. ವೈಯಕ್ತಿಕ ಟೀಕೆಗಳಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಪಕ್ಷ ಮತ್ತು ವರಿಷ್ಠರು ಏನು ಹೇಳಿದ್ದಾರೋ ಆ ಕೆಲಸವನ್ನು ಮಾತ್ರ ಮಾಡಿದ್ದೇನೆ. ಎಲ್ಲ ಬೆಳವಣಿಗೆಯನ್ನು ಜನತೆ ಗಮನಿಸಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಲೋಕಲ್ ಸಮಸ್ಯೆ ಇತ್ಯರ್ಥ:
ಅವಿರೋಧವಾಗಿ ಎಲ್ಲರನ್ನು ಆಯ್ಕೆ ಮಾಡಿದ್ದೇವೆ. ಇಂದು ಮಾಡಿದ್ದ ಕೆಲಸವನ್ನು ಕಾರ್ಯಧ್ಯಕ್ಷರು ಮೊದಲೇ ಮಾಡಬೇಕಿತ್ತು. ಸ್ವಲ್ಪ ತಡವಾಗಿದ್ದರಿಂದ ಇಷ್ಟೆಲ್ಲಾ ಗೊಂದಲ ನಿರ್ಮಾಣವಾಗಿತ್ತು. ಇದೊಂದು ಸ್ಥಳೀಯ ಮಟ್ಟದ ಸಮಸ್ಯೆ ಇದಾಗಿದ್ದು, ಇಲ್ಲಿಯೇ ಬಗೆಹರಿಸಿಕೊಂಡಿದ್ದೇವೆ. ಪಕ್ಷ ಅಂತಾ ಬಂದಾಗ ನಮ್ಮಲ್ಲಿ ಏನೇ ಗೊಂದಲಗಳಿದ್ದರೂ ನಾವೆಲ್ಲರೂ ಒಂದಾಗುತ್ತೇವೆ ಅಂತಾ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಅವಿರೋಧ ಆಯ್ಕೆಯ ನಂತರ ಸರ್ಕಿಟ್ ಹೌಸ್‍ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಯಿತು. ಎಲ್ಲಾ ಸಮಸ್ಯೆ ಬಗೆಹರಿದಿದೆ. ಎಲ್ಲವನ್ನೂ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಂಡಿದ್ದೇವೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರೂ ಪರಸ್ಪರ ಮುಖ ನೋಡದೇ ಮಾತು ಮುಗಿಸಿದ್ರು.