ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ (Lakshmi Hebbalkar) ಠಕ್ಕರ್ ನೀಡಲು ಖಾನಾಪೂರದ ಶಾಸಕಿ ಅಂಜಲಿ ನಿಂಬಾಳ್ಕರ್ (Anjali Nimbalkar) ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ (KPCC Working President) ಮಾಡಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಪ್ಲ್ಯಾನ್ ಮಾಡಿದ್ದಾರೆ.
ಹೌದು. ರಾಜ್ಯದಲ್ಲಿ ಕಾಂಗ್ರೆಸ್ (Congress) ನಾಯಕರ ಕಿತ್ತಾಟ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿ ಬಹಿರಂಗವಾಗಿ ಪ್ರಸ್ತಾಪಿಸಿದ ಬೆನ್ನಲ್ಲೇ ಹೈಕಮಾಂಡ್ ದೆಹಲಿಗೆ ಬರುವಂತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಬುಲಾವ್ ನೀಡಿದೆ. ಮೊಬೈಲಿನಲ್ಲೇ ಲೇಟೆಸ್ಟ್ ಸುದ್ದಿ ಓದಲು ಪಬ್ಲಿಕ್ ಟಿವಿ ವಾಟ್ಸಪ್ ಚಾನೆಲಿಗೆ ಸೇರ್ಪಡೆಯಾಗಿ: ಪಬ್ಲಿಕ್ ಟಿವಿ ವಾಟ್ಸಪ್ ಚಾನೆಲ್
Advertisement
Advertisement
ಡಿಕೆಶಿ ದೆಹಲಿಗೆ ತೆರಳುವ ಮುನ್ನಾ ಸತೀಶ್ ಜಾರಕಿಹೊಳಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಐದು ಕಾರ್ಯಾಧ್ಯಕ್ಷರ ಪೈಕಿ ನಾಲ್ವರು ಕಾರ್ಯಾಧ್ಯಕ್ಷರನ್ನು ಬದಲಾವಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ:ಇಸ್ರೇಲ್ ದಾಳಿ ನಿಲ್ಲಿಸಲು ನಿಮ್ಮ ಸಾಮರ್ಥ್ಯ ಬಳಸಿ: ಮೋದಿಗೆ ಕರೆ ಮಾಡಿ ಇರಾನ್ ಅಧ್ಯಕ್ಷ ಮನವಿ
Advertisement
ಮಾಜಿ ಸಂಸದ ಹಾಗೂ ಕಾರ್ಯಾಧ್ಯಕ್ಷ ಚಂದ್ರಪ್ಪ ಹೊರತು ಪಡಿಸಿ ಉಳಿದ ನಾಲ್ವರು ಬದಲಾಗಬೇಕೆಂದು ಹೇಳಿದ್ದಾರೆ. ಈ ಪೈಕಿ ಮಹಿಳಾ ಕೋಟಾದಲ್ಲಿ ಅಂಜಲಿ ನಿಂಬಾಳ್ಕರ್ ಹೆಸರು ಅಂತಿಮ ಪಡಿಸುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
Advertisement
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಹಿಳಾ ಕೋಟಾದಲ್ಲಿ ಅಂಜಲಿ ನಿಂಬಾಳ್ಕರ್ ನೇಮಕ ಬಹುತೇಕ ಖಚಿತ ಎನ್ನಲಾಗಿದೆ. ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಠಕ್ಕರ್ ನೀಡಲು ನಿಂಬಾಳ್ಕರ್‌ಗೆ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ.