ಉಡುಪಿ: ಶೋಭಾ ಕರಂದ್ಲಾಜೆ (Shobha Karandlaje) ಅವರು ಯಾವಾಗಲೂ ಉರಿವ ಬೆಂಕಿಗೆ ತುಪ್ಪ ಸುರಿಯುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಬಗ್ಗೆ ಮಹಿಳೆಯಾಗಿ ವೈಯಕ್ತಿಕ ಗೌರವ ಇದೆ. ಶೋಭಾ ಯಾವಾಗಲೂ ಉರಿವ ಬೆಂಕಿಗೆ ತುಪ್ಪ ಸುರಿಯುತ್ತಾರೆ. ಯಾವಾಗಲೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಮುಡಾ ಕೇಸ್‌ನಲ್ಲಿ ರಾಜಕೀಯ ಪ್ರೇರಿಯ ಇಡಿ ರೈಡ್ ನಡೆಯುತ್ತಿದೆ. ರಾಜಭವನ, ರಾಜ್ಯಪಾಲರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿರುವ ಬೈರತಿ ಸುರೇಶ್‌ರನ್ನು ಕೂಡಲೇ ಬಂಧಿಸಿ – ಶೋಭಾ ಕರಂದ್ಲಾಜೆ
ಕರಾವಳಿಗೆ ಅನ್ಯಾಯ-ಕಾಂಗ್ರೆಸ್‌ನಿಂದ ಬಿಡಿಗಾಸು ಅನುದಾನ ಇಲ್ಲ ಎಂಬ ಬಿಜೆಪಿ ದೂರು. ಕೇಂದ್ರದಿಂದಾಗುವ ಅನ್ಯಾಯದ ಬಗ್ಗೆ ಧನಿಯೆತ್ತಿಲ್ಲ ಯಾಕೆ? ರಾಜ್ಯದ ಬಿಜೆಪಿ ಸಂಸದರು ಏನು ಮಾಡ್ತಿದ್ದಾರೆ? ತಲೆ ಇಲ್ವಾ? ದಾರಿ ತಪ್ಪಿಸಿ ಗೂಬೆ ಕೂರಿಸೋ ಕೆಲಸ ಬಿಡಿ. ಬಿಜೆಪಿಗೆ ಆಪಾದನೆ ಮಾಡೋದು ಬಿಟ್ಟು ಬೇರೇನು ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಸ್ಥಳೀಯಾಡಳಿತ ಉಪಚುನಾವಣೆ ಬಗ್ಗೆ ಮಾತನಾಡಿ, ರಾಜು ಪುಜಾರಿ ಪರ ಕೊನೆಯ ಹಂತದ ಪ್ರಚಾರ ತಯಾರಿ ನಡೆಯುತ್ತಿದೆ. ಪಕ್ಷ ಗಟ್ಟಿಯಾಗಲು ಕಾಂಗ್ರೆಸ್‌ಗೆ ಗೆಲ್ಲುವ ಅಗತ್ಯ ಇದೆ. ನಮ್ಮ ಅಭ್ಯರ್ಥಿ ಗೆಲ್ಲುವ ಎಲ್ಲಾ ತಯಾರಿ ಮಾಡಿದ್ದೇವೆ. ಬಿಜೆಪಿ ಓವರ್ ಕಾನ್ಫಿಡೆನ್ಸ್. ಅದು ಊಹಿಸೋದೆ ಬೇರೆ, ಅಲ್ಲಿ ಆಗೋದೆ ಬೇರೆ. ಓವರ್ ಕಾನ್ಫಿಡೆನ್ಸ್‌ನಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ನಮಗೆ ಗ್ಯಾರಂಟಿ ಮೇಲೆ ಭರವಸೆ ಇದೆ, ಹೀಗಾಗಿ ಗೆಲ್ಲುತ್ತೇವೆ. ಪಂಚಾಯತ್‌ಗೆ ಶಕ್ತಿ ತಂದುಕೊಟ್ಟಿದ್ದೇ ಕಾಂಗ್ರೆಸ್. ಉದ್ಯೋಗ ಖಾತ್ರಿ, ನರೇಗಾದಂತಹ ಹತ್ತಾರು ಯೋಜನೆ ಜಾರಿಗೆ ತರಲಾಗಿದೆ. ಪಂಚಾಯತ್‌ನ ಪರಿಕಲ್ಪನೆಯೇ ಕಾಂಗ್ರೆಸ್‌ನದ್ದು ಎಂದಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ ಭಾಗ್ಯ
ಕಸ್ತೂರಿ ರಂಗನ್ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ಈಗ ಭರವಸೆ ಕೊಡಲ್ಲ, ನೀತಿ ಸಂಹಿತೆ ಇದೆ. ಅರಣ್ಯ ಮಂತ್ರಿ ಖಂಡ್ರೆಯವರ ಜೊತೆ ಚರ್ಚೆ ಮಾಡಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.