ಬೆಳಗಾವಿ: ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ, ಉದ್ಯೋಗವಕಾಶಕ್ಕಾಗಿ 2ಎ ಮೀಸಲಾತಿಗೆ ಆಗ್ರಹಿಸಲಾಗುತ್ತಿದೆ. ಹೀಗಾಗಿ ಬೆಳಗಾವಿ ಸುವರ್ಣ ಸೌಧದಲ್ಲಿ ಡಿ.22ರಂದು 25 ಲಕ್ಷ ಜನರನ್ನು ಸೇರಿಸಿ ಉಗ್ರ ಹೋರಾಟ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಅಗ್ನಿಪರೀಕ್ಷೆ ನಡೆಯುತ್ತಿದೆ. ಸಮಾಜದ ಮಕ್ಕಳಿಗೆ ಶಿಕ್ಷಣ, ಉದ್ಯೋಗವಕಾಶಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ತಮ್ಮೆಲ್ಲರ ಬೆಂಬಲ ಸಿಗದಿದ್ದರೆ ಇಷ್ಟು ದೊಡ್ಡ ಹೋರಾಟ ಆಗುತ್ತಿರಲಿಲ್ಲ. ಯತ್ನಾಳ್ ಅಣ್ಣಾ ಸರ್ಕಾರದ ವಿರುದ್ಧ ತಮ್ಮ ಪಕ್ಷದ ವಿರುದ್ಧ ಮಾತನಾಡಿದರು. ರಾಜಕಾರಣದಲ್ಲಿ ಒಂದೇ ಸಮಾಜದಿಂದ ಏನು ಆಗಲ್ಲ. ಎಲ್ಲರನ್ನೂ ಕೂಡಿಸಿಕೊಂಡು ಹೋಗಬೇಕು. ಆದರೆ, ನಮ್ಮ ಸಮಾಜಕ್ಕೆ ಏನಾದರೂ ಕೊಡಬೇಕು. ಪಂಚಮಸಾಲಿ ಸಮುದಾಯದ ಮೀಸಲಾತಿ ರಾಜ್ಯ ಅಷ್ಟೇ ಅಲ್ಲ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಗುಜರಾತ್‍ನಲ್ಲಿ ಪಾಟೀದಾರ್ ಸಮುದಾಯ ಮೀಸಲಾತಿ ಬಗ್ಗೆ ಚರ್ಚೆ ಆಗಿತ್ತು. ಅದಕ್ಕಿಂತ ದೊಡ್ಡ ಮಟ್ಟಿಗೆ ಚರ್ಚೆ ಪಂಚಮಸಾಲಿ ಸಮುದಾಯ ಬಗ್ಗೆ ಚರ್ಚೆ ಆಗುತ್ತಿದೆ ಎಂದರು.
Advertisement
Advertisement
ಇದು ನಮ್ಮ ಕೊನೆ ಘಳಿಗೆ, ಜಾಸ್ತಿ ಶ್ರಮ ಹಾಕಬೇಕಿದೆ. ಡಿ.22ರ ವಿರಾಟ್ ಪಂಚಮಸಾಲಿ ಸಮಾವೇಶಕ್ಕೆ ಎಲ್ಲರೂ ಜನರ ಕರೆದುಕೊಂಡು ಬರಲು ಒಪ್ಪಿದ್ದಾರೆ. ಪಂಚಮಸಾಲಿ ಸಮುದಾಯ ಇಂದು ಜಾಗೃತವಾಗಿದೆ. ಡಿ.22ರೊಳಗೆ ಸಿಎಂ ನಿರ್ಣಯ ಕೈಗೊಳ್ಳದಿದ್ರೆ ಹೋರಾಟ ಮಾಡುತ್ತೇವೆ. ಆದರೆ ಇನ್ನೂವರೆಗೂ ಸರ್ಕಾರದಿಂದ ಏನೂ ಮೂವ್ಮೆಂಟ್ ಕಾಣುತ್ತಿಲ್ಲ. ನಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದೇವೆ. ನಮ್ಮ ಗುರುಗಳಿಗೆ ಮರ್ಯಾದೆ ಇದೆಯೋ ಇಲ್ವೋ, ನಮ್ಮ ದೊಡ್ಡ ಸಮಾಜ ಬಗ್ಗೆ ಮರ್ಯಾದೆ ಇಲ್ವೋ ಅಂತಾ ಸಂಕಟವಾಗುತ್ತಿದೆ. ಯಾರು ನಮಗೆ ಮರ್ಯಾದೆ ಕೊಡ್ತಾರೆ ಅವರಿಗೆ ಜೈ ಏನ್ನೋಣ ಎಂದು ತಿಳಿಸಿದರು. ಇದನ್ನೂ ಓದಿ: ನರ್ಸಿಂಗ್ ಕಾಲೇಜಿನಲ್ಲಿ ಮಾಸ್ ಕಾಪಿ – 10 ಸಾವಿರ ವಸೂಲಿ ಮಾಡಿ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ
Advertisement
Advertisement
ಜಗದ್ಗುರು ನಿಸ್ವಾರ್ಥತೆಯಿಂದ ನಮ್ಮ ಬೆನ್ನಿಗೆ ಇದ್ದಾರೆ. ವಿರಾಟ್ ಸಮಾವೇಶ ತಯಾರಿ ನೋಡಿ ಸಿಎಂ ಏನಾದರೂ ಮೂವ್ಮೆಂಟ್ ಮಾಡಬೇಕು. ಬೆಳಗಾವಿ ಗ್ರಾಮೀಣ ಭಾಗದಲ್ಲಿ ಬಾಗೇವಾಡಿ ಜನತೆ ಬಿಟ್ಟು ಬೇರೆ ಎಲ್ಲೂ ನಮ್ಮ ಸಮಾಜ ಇಲ್ಲ. ನನಗೆ ಕೊಟ್ಟ ಜವಾಬ್ದಾರಿ ನಾನು ನಿಭಾಯಿಸುತ್ತೇನೆ. ಹೋರಾಟದಲ್ಲಿ ಏನೇ ಸೇವೆ ಮಾಡಲು ಹೇಳಿದರೂ ಅಣಿಯಾಗುತ್ತೇನೆ. ನಾನು, ನನ್ನ ಸಹೋದರ, ನನ್ನ ಮಗ ಎಲ್ಲರೂ ಜವಾಬ್ದಾರಿ ನಿಭಾಯಿಸುತ್ತೇವೆ. ಸಿಎಂ ಹಾಗೂ ಸಂಬಂಧಪಟ್ಟವರ ಬಳಿ ತಾವು ಮಾತನಾಡಬೇಕು ಎಂದು ಯತ್ನಾಳ್‍ಗೆ ಮನವಿ ಮಾಡಿದರು. ಇದನ್ನೂ ಓದಿ: ರಾಯಚೂರಿನ 5 ವರ್ಷದ ಮಗುವಿನಲ್ಲಿ ಝಿಕಾ ವೈರಸ್ ಪತ್ತೆ