ಬೆಳಗಾವಿ: ನಾನು ಯಾರನ್ನೂ ಟೂರ್‌ಗೆ ಕಳಿಸುತ್ತಿಲ್ಲ, ವಿರೋಧಿಗಳ ಒತ್ತಡ, ಧಮ್ಕಿಗೆ ಹೆದರದೇ ಮತ ಚಲಾಯಿಸಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
Advertisement
Advertisement
ವಿಧಾನಪರಿಷತ್ ಚುನಾವಣೆ ಡಿಸೆಂಬರ್ 10 ರಂದು ನಡೆಯುತ್ತಿದೆ. ಕೆಲವು ಜನರು ಲಕ್ಷ್ಮೀ ಹೆಬ್ಬಾಳ್ಕರ್ ಟೂರ್‌ಗೆ ಕರೆದಿದ್ದಾರೆ ಎಂದು ಹೇಳಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾನು ಯಾವ ಜನರನ್ನು ಟೂರ್‌ಗೆ ಕಳಿಸುತ್ತಿಲ್ಲ. ತಾವು ಕೂಡ ಯಾಮಾರಬೇಡಿ. ಇಲ್ಲಿಯೇ ಇದ್ದು, ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟಿರುವ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು
Advertisement
Advertisement
ಮಾಧ್ಯಮಗಳಿಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯಾವುದೇ ಒತ್ತಡಕ್ಕೆ, ಧಮ್ಕಿಗೆ ತಾವು ಹೆದರುವ ಅವಶ್ಯಕತೆ ಇಲ್ಲ. ನ್ಯಾಯಯುತವಾದ ಚುನಾವಣೆಯನ್ನು ನಾವು ಮಾಡೋಣ. ಎಲ್ಲರೂ ನನಗೆ ಸಹಾಯ, ಸಹಕಾರ, ಆಶೀರ್ವಾದ ಮಾಡಿ. ನಿಮ್ಮ ಜೊತೆಗೆ ಮನೆ ಮಗಳಾಗಿ ಯಾವತ್ತೂ ಇರುತ್ತೇನೆ. ನನ್ನ ತಮ್ಮ, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮುಖಂಡರು ತಮ್ಮ ಜೊತೆಗೆ ಯಾವಾಗಲೂ ಇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: UAEಯಲ್ಲಿ ನಾಲ್ಕೂವರೆ ದಿನ ಮಾತ್ರ ಕೆಲಸ – ಶನಿವಾರ, ಭಾನುವಾರ ವೀಕೆಂಡ್