ಬೆಳಗಾವಿ: ರಮೇಶ್ ಜಾರಕಿಹೊಳಿಯವರು ಮುಂಚೆ ನಮ್ಮ ಪಕ್ಷದಲ್ಲಿ ಇದ್ದರು. ಇಲ್ಲಿ ಬಂಡುಕೋರರಾಗಿ ಅವರಿಗೆ ಸಮಾಧಾನ ಸಿಗಲಿಲ್ಲ. ಈಗ ಅವರು ಬಿಜೆಪಿ ಪಕ್ಷಕ್ಕೆ ಹೋಗಿದ್ದು, ಅಲ್ಲಿಯೂ ಬಂಡುಕೋರ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬಿಜೆಪಿ ಪಕ್ಷ ನೋಡಿಕೊಳ್ಳುತ್ತದೆ. ನಾನು ಉತ್ತರ ಕೊಡುವುದಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
ರಾಯಬಾಗ ತಾಲೂಕಿನ ಹಂದಿಗುಂದದಲ್ಲಿ ಬೆಳಗಾವಿ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಮಾತನಾಡಿದರು. ಇದನ್ನೂ ಓದಿ: ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡಬೇಕು – ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್
Advertisement
Advertisement
ಈ ಬಾರಿಯ ಚುನಾವಣೆಯಲ್ಲಿ ಮೂರು ಮಂದಿಯೂ ನಾವು ಗೆಲ್ಲಬೇಕು, ನಾವು ಗೆಲ್ಲಬೇಕು ಎಂದು ಓಡಾಡುತ್ತಿದ್ದೇವೆ. ಒಬ್ಬರು ಬಿಜೆಪಿಯಿಂದ ಓಡಾಡುತ್ತಿದ್ದಾರೆ. ಕಾಂಗ್ರೆಸ್ ನಿಂದ ನಾವು ಓಡಾಡುತ್ತಿದ್ದೇವೆ. ಪಕ್ಷೇತರವಾಗಿ ಒಬ್ಬರು ಓಡಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಥೂ ಥೂ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಮಯವಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ಬಿಜೆಪಿಯಲ್ಲಿ ಬಾಯಿ ತೆಗೆದರೆ ರಾಮ ರಾಮ ಅಂತ ಹೇಳುತ್ತಾರೆ. ಒಬ್ಬ ಮಹಿಳಾ ಶಾಸಕಿ ಬಗ್ಗೆ ಹೀನವಾಗಿ ಮಾತನಾಡಿದ್ದಾರೆ. ಒಬ್ಬಳು ಶಾಸಕಿಗೆ ಕಿಮ್ಮತ್ತು ನೀಡದವರು ಮಹಿಳೆಗೆ ಗೌರವ ಕೊಡುತ್ತಾರಾ? ಇದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಮಹಿಳಾ ಮತದಾರರಿಗೆ ಬಿಟ್ಟ ವಿಚಾರ ಎಂದು ಹೇಳಿದರು. ಇದನ್ನೂ ಓದಿ: ಕೊಲ್ಹಾಪುರ ಮಹಾಲಕ್ಷ್ಮಿ ಪಾದ ಮುಟ್ಟಿ ಹೇಳ್ತೀನಿ ನಾನು ಟಿಕೆಟ್ ಬೇಡಿಲ್ಲ : ರಮೇಶ್ ಜಾರಕಿಹೊಳಿ
ನನಗೆ ನನ್ನ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕೆನ್ನುವುದು ಒಂದೇ ಗುರಿ. ಅರ್ಜುನನ ಗುರಿ ಎಲ್ಲಿತ್ತು ಎಂದರೆ ಪಾರಿವಾಳ ಕಣ್ಣಿಗೆ ಇತ್ತು ಅನ್ನುವ ಹಾಗೆ. ನನಗೆ ಅದರ ಬಗ್ಗೆ ಕಾಮೆಂಟ್ ಮಾಡುವಷ್ಟು ಟೈಮ್ ಇಲ್ಲ, ತಲೆಯೂ ಓಡುವುದಿಲ್ಲ ಎಂದು ಉತ್ತರಿಸಿದರು.