ರಾಘು, ಶೆಫ್ ಚಿದಂಬರದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಎಂ. ಆನಂದ್ ರಾಜ್ ಈಗ ಹೊಸ ಸಿನಿಮಾ ಕೈಗೆತ್ತಿಗೊಂಡಿದ್ದಾರೆ. ‘ಬಿಗ್ ಬಾಸ್ ಸೀಸನ್ 8’ರಲ್ಲಿ ಸ್ಪರ್ಧಿಸಿ ಜನಪ್ರಿಯತೆ ಪಡೆದಿರುವ, ಆ ಬಳಿಕ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್ ಮೂಲಕ ಕಿರುತೆರೆ ಮನೆ ಮಾತನಾಗಿರುವ ಬ್ರೋ ಗೌಡ ಶಮಂತ್ ಅವರನ್ನು ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್‌ಗೆ ಚಾಕು ಇರಿತ ಕೇಸ್: ಮೂವರು ಶಂಕಿತರು ವಶಕ್ಕೆ
Advertisement
‘ಲಕ್ಷ್ಮಿ ಬಾರಮ್ಮ’ ಧಾರವಾಹಿಯ ಬ್ರೋ ಗೌಡ ಶಮಂತ್ (Bro Gowda Shamanth) ನಾಯಕನಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಚಿತ್ರಕ್ಕೆ ಎಂ. ಆನಂದ್ ರಾಜ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದು ಕನ್ನಡದ ಮೊದಲ ಝಾಂಬಿ ಸಿನಿಮಾ. ಚಿತ್ರದಲ್ಲಿ ಹೈ-ಲೆವೆಲ್ ಆಕ್ಷನ್ ಸೀನ್‌ಗಳು ಇರುತ್ತವೆ. ಹಾಲಿವುಡ್ ಸಿನಿಮಾಗಳಲ್ಲಿ ಇರುವಂತಹ ಆ್ಯಕ್ಷನ್ ಅನ್ನು ಇಲ್ಲಿ ನೋಡಬಹುದು. ಹಾಗಾಗಿ, ಇದನ್ನು ವೈಲೆಂಟ್ ಆಕ್ಷನ್ ಡ್ರಾಮಾ ಅಂತ ಆನಂದ್ ಹೇಳಿದ್ದಾರೆ.
Advertisement
Advertisement
ಬ್ರೋ ಮೀಡಿಯಾ ಮತ್ತು ಸನ್ ರೈಸ್ ಕ್ಯಾಮೆರಾಸ್ ಪ್ರೊಡಕ್ಷನ್ ನಡಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ಪ್ರೊಡಕ್ಷನ್ 1’ ಅಂತ ತಾತ್ಕಾಲಿಕ ಟೈಟಲ್ ಇಡಲಾಗಿದೆ. ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಏಪ್ರಿಲ್ ತಿಂಗಳಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಕೊಡಗು ಸುತ್ತಮುತ್ತ, ಅದರಲ್ಲೂ ಮುಖ್ಯವಾಗಿ, ಕಾಡುಗಳಲ್ಲಿ ಹೆಚ್ಚು ಶೂಟಿಂಗ್ ಇರಲಿದೆ. ಚಿತ್ರಕ್ಕೆ ಉದಯ್ ಲೀಲಾ ಕ್ಯಾಮೆರಾ ಹಿಡಿಯುತ್ತಿದ್ದು, ವಿಜೇತ್ ಚಂದ್ರ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆಕ್ಷನ್ ಡ್ರಾಮಾ ಕಥೆಗೆ ಎಂ ಆನಂದ್ ರಾಜ್ ಹಾರರ್ ಟಚ್ ಕೊಟ್ಟಿದ್ದಾರೆ.