ಕಿರುತೆರೆಯ ಜನಪ್ರಿಯ ‘ಲಕ್ಷ್ಮಿ ಬಾರಮ್ಮ’ ವಿಧಿ ಪಾತ್ರಧಾರಿ ಲಾವಣ್ಯ ಹಿರೇಮಠ್ (Lavanya Hiremath) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದು, ಮದುವೆ (Wedding) ಬಗ್ಗೆ ಲಾವಣ್ಯ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಹೇಮಾ ಚೌಧರಿ, ನರಸಿಂಹಮೂರ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
View this post on Instagram
ಲಾವಣ್ಯ ಹಿರೇಮಠ್ ಭಾವಿ ಪತಿ ಜೊತೆಗೆ ರೊಮ್ಯಾಂಟಿಕ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅದರ ಜೊತೆಗೆ ಮದುವೆಯಾಗುವ ಹುಡುಗ ಯಾರೆಂದು ಟ್ಯಾಗ್ ಕೂಡ ಮಾಡಿದ್ದಾರೆ. ನಟಿ ಕಮ್ ಡೆಂಟಿಸ್ಟ್ ಆಗಿರುವ ಲಾವಣ್ಯ ಮದುವೆಯಾಗುತ್ತಿರುವ ಹುಡುಗನ ಹೆಸರು ಅಕ್ಷಯ್ ಆಚಾರ್ಯ. ಅವರು ಕೂಡ ಡೆಂಟಿಸ್ಟ್ ಆಗಿದ್ದಾರೆ.
ಇನ್ನೂ ನವೆಂಬರ್ 11ರಂದು ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಲಾವಣ್ಯ ಹಸೆಮಣೆ ಏರಲಿದ್ದಾರೆ. ನಟಿಯ ಮದುವೆಯಲ್ಲಿ ಕುಟುಂಬಸ್ಥರು. ಕಿರುತೆರೆ ಕಲಾವಿದರು, ಆಪ್ತರು ಭಾಗಿಯಾಗಲಿದ್ದಾರೆ.