‘ಲಕ್ಷಣ’ ಸೀರಿಯಲ್ ಕೆಡಿ ಶ್ವೇತಾ ಅಲಿಯಾಸ್ ಸುಕೃತಾ ನಾಗ್ (Sukrutha Nag) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕುಟುಂಬಸ್ಥರು ನೋಡಿರುವ ಸಿಡ್ನಿ (Sydney) ಹುಡುಗನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?
View this post on Instagram
ಕಿರುತೆರೆ Lakshana ಸೀರಿಯಲ್‌ನಲ್ಲಿ ಹೀರೋ ಭೂಪತಿಗೆ ನಕ್ಷತ್ರಾ ಜೊತೆ ಮದುವೆಯಾಗಿದೆ ಆದ್ರೂ ಅವನೇ ಬೇಕು ಅಂತಾ ಭೂಪತಿ ಹಿಂದೆ ಬಿದ್ದಿರುವ ಕೆಡಿ ಶ್ವೇತಾ ಅಲಿಯಾಸ್ ಸುಕೃತಾ ನಾಗ್ ರಿಯಲ್ ಲೈಫ್‌ನಲ್ಲಿ ಮದುವೆಗೆ ತಯಾರಿ ಮಾಡ್ತಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಸ್ನೇಹಿತರಿಗೆ ಕರೆ ಮಾಡಿ ರಿವೀಲ್ ಮಾಡಿದ್ದಾರೆ.
View this post on Instagram
ತನ್ನ ಸೀರಿಯಲ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್‌ಗೆ ಕಾಲ್ ಮಾಡಿ, ತಾನು ಸಿಡ್ನಿ ಹುಡುಗನನ್ನು ಮದುವೆ ಆಗ್ತಿದ್ದೀನಿ. ಈ ವರ್ಷದ ಕೊನೆಯಲ್ಲಿ ಮದುವೆ. ಅಮ್ಮನೆ ನೋಡಿರೋ ಹುಡುಗ. ಅರೇಂಜ್ಡ್ ಮ್ಯಾರೇಜ್ ಅನ್ನೋ ಸಂಗತಿಯನ್ನು ಸುಕೃತಾ ಹೇಳಿದ್ದಾರೆ. ಅದನ್ನು ಕೇಳಿ ಫ್ರೆಂಡ್ಸ್ ಎಲ್ಲ ಸಖತ್ ಖುಷಿಯಾಗಿ ವಿಶ್ ಮಾಡಿದ್ದಾರೆ. ಈ ವಿಷ್ಯಾ ಈಗ ಹೇಳಿದ್ಯಾ ಅಂತಾ ಫ್ರೆಂಡ್ಸ್ ಚೆನ್ನಾಗಿಯೇ ಚೆನ್ನಾಗಿಯೇ ಕ್ಲಾಸ್ ತಗೊಂಡಿದ್ದಾರೆ.
ಸುಕೃತಾ ಕಾಲ್ ಮಾಡಿ ತನ್ನ ಮದುವೆ ವಿಚಾರ ತಿಳಿಸಿದ್ದು ‘ಲಕ್ಷಣ’ ಸೀರಿಯಲ್‌ನಲ್ಲಿ ಡೆವಿಲ್ ಭಾರ್ಗವಿ ಪಾತ್ರದಲ್ಲಿ ಮಿಂಚುತ್ತಿರುವ ಪ್ರಿಯಾ, ವಿಜಯಲಕ್ಷ್ಮಿ ಹಾಗೂ ಆಕೆಯ ಸ್ನೇಹಿತರಿಗೆ. ಮೊದಲಿಗೆ ಪ್ರಿಯಾಗೆ ಕಾಲ್ ಮಾಡಿ ವಿಷಯ ತಿಳಿಸಿದಾಗ ಅವರು ಸಖತ್ ಥ್ರಿಲ್ ಆದ್ರು. ತನ್ನ ಬೆಸ್ಟ್ ಫ್ರೆಂಡ್‌ಗೆ ಅಭಿನಂದನೆಯನ್ನು ತನ್ನದೇ ಸ್ಟೈಲಲ್ಲಿ ತಿಳಿಸಿದ್ರು. ಆಮೇಲೆ ಸೀರಿಯಲ್ ಸಹನಟಿ(Nakshatra) ವಿಜಯಲಕ್ಷ್ಮಿಗೆ ಕಾಲ್ ಮಾಡಿ ಹೇಳಿದಾಗಲೂ ಆಕೆ ಇದನ್ನು ಕೇಳಿ ಖುಷಿಪಟ್ಟರು.
ಅಂದಹಾಗೆ ವೀಡಿಯೋ ಮಾಡಿರೋದು ಏಪ್ರಿಲ್ 1ಕ್ಕೆ, ತನ್ನ ಮದುವೆ ಅಂತಾ ಹೇಳಿ ನಟಿ ಸುಕೃತಾ ನಾಗ್ ಸಖತ್ ಆಗಿ ಎಲ್ಲರಿಗೂ ಬಕ್ರಾ ಮಾಡಿದ್ದಾರೆ. ಸಖತ್ ಆಗಿ ಆಕ್ಟ್ ಮಾಡಿ, ಎಲ್ಲರಿಗೂ ಫೂಲ್ ಮಾಡಿದ್ದಾರೆ.