ನವದೆಹಲಿ: ರಾಹುಲ್ ಗಾಂಧಿ (Rahul Gandhi) ಅನರ್ಹತೆ ವಿಚಾರ ಸದ್ದು ಮಾಡುತ್ತಿರುವ ಹೊತ್ತಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಲಕ್ಷದ್ವೀಪದ (Lakshadweep) ಎನ್‍ಸಿಪಿ (NCP) ಸಂಸದ (MP) ಮಹ್ಮದ್ ಫೈಸಲ್ (Mohammed Faizal) ವಿರುದ್ಧದ ಅನರ್ಹತೆ ಅಸ್ತ್ರವನ್ನು ಲೋಕಸಭೆ ಕಾರ್ಯಾಲಯ ದಿಢೀರ್ ಎಂದು ಹಿಂಪಡೆದಿದೆ.
ಮಹ್ಮದ್ ಫೈಸಲ್ ಅವರ ಲೋಕಸಭೆ (Lok Sabha) ಸದಸ್ಯತ್ವವನ್ನು ಪುನರ್‌ಸ್ಥಾಪಿಸಿ ನೋಟಿಫಿಕೇಶನ್ ಹೊರಡಿಸಿದೆ. ಮಹ್ಮದ್ ಫೈಸಲ್ ಅನರ್ಹತೆ ವಿಚಾರ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರುವ ಕೆಲವೇ ಕ್ಷಣಗಳಿಗೆ ಮೊದಲು ಲೋಕಸಭೆ ಕಾರ್ಯಾಲಯ ನೋಟಿಫಿಕೇಷನ್ ಹೊರಡಿಸಿತು. ಈ ಪ್ರಕರಣವೀಗ ರಾಹುಲ್ ಗಾಂಧಿ ಪ್ರಕರಣದ ಮೇಲೆ ಪರಿಣಾಮ ಬೀರುವ ಸಂಭವ ಇದೆ. ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ- ಮೂವರು ಅರೋಪಿಗಳ ಬಂಧನ
Advertisement
Advertisement
2009ರ ಕೊಲೆ ಯತ್ನ ಕೇಸಲ್ಲಿ ಮಹ್ಮದ್ ಫೈಸಲ್‍ಗೆ ಇದೇ ಜನವರಿಯಲ್ಲಿ ಸ್ಥಳೀಯ ಕೋರ್ಟ್ 10 ವರ್ಷ ಶಿಕ್ಷೆ ವಿಧಿಸಿತ್ತು. ಈ ಬೆನ್ನಲ್ಲೇ ಮಹ್ಮದ್ ಫೈಸಲ್ ಸಂಸದ ಸ್ಥಾನದಿಂದ ಅನರ್ಹರಾಗಿದ್ದರು. ಆದ್ರೆ, ಸ್ಥಳೀಯ ಕೋರ್ಟ್ ತೀರ್ಪಿಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದಾದ ನಂತರವೂ, ಅನರ್ಹತೆ ತೆರವು ಮಾಡಿಲ್ಲ ಎಂದು ಲೋಕಸಭೆ ಕಾರ್ಯಾಲಯದ ವಿರುದ್ಧ ಮಹ್ಮದ್ ಫೈಸಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಪೂರ್ಣ ಬಹುಮತ : ಎಬಿಪಿ ಸಿ- ವೋಟರ್ ಸಮೀಕ್ಷೆ