ಕಾರವಾರ: ವಿವಿಧ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡ ಸುಮಾರು 8,170.75 ಲೀಟರ್ ಗೋವಾ ಹಾಗೂ ಕರ್ನಾಟಕದ ಮದ್ಯವನ್ನು ಕಾರವಾರದ ಅಬಕಾರಿ ಇಲಾಖೆಯ ಕಚೇರಿ ಆವರಣದಲ್ಲಿ ನಾಶಪಡಿಸಲಾಯಿತು.
ವಿಧಾನಸಭಾ ಚುನಾವಣೆಯಿಂದ ಈವರೆಗೂ ಜಿಲ್ಲೆಯಾದ್ಯಾಂತ 121 ವಿವಿಧ ಮೊಕದ್ದಮೆಯನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ದಾಖಲಿಸಿಕೊಂಡಿದೆ. ಈ ಪ್ರಕರಣ ಅಡಿಯಲ್ಲಿ ಒಟ್ಟು 23.73 ಲಕ್ಷ ರೂ. ಮೌಲ್ಯದ 8,170.75 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿತ್ತು.
Advertisement
Advertisement
ಕಳ್ಳಬಟ್ಟಿ, ಗೋವಾ ಮದ್ಯ, ಬಿಯರ್, ಐಎಂಎಫ್‍ಎಲ್ ಹಾಗೂ ಸೇದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಂಕೋಲಾ, ಕುಮಟಾ, ಹೊನ್ನವಾರ ಬಟ್ಕಾಳ, ಯಲ್ಲಾಪುರ, ಶಿರಸಿ, ದಂಡೇಲಿ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 459 ಲೀಟರ್ ಮದ್ಯ, 518 ಲೀಟರ್ ಬಿಯರ್ ವಶಕ್ಕೆ ಪಡೆಯಲಾಗಿದ್ದು, ಒಟ್ಟು 23.73 ಲಕ್ಷ ರೂ ಮೌಲ್ಯದ 8,170.75 ಲೀಟರ್ ಮದ್ಯಗಳನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv