– ಆರೋಪ ಸಾಬೀತು ಹಿನ್ನೆಲೆ 6 ವರ್ಷ ಚುನಾವಣೆ ನಿಲ್ಲದಂತೆ ಅನರ್ಹ
– ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಆದೇಶ
ರಾಯಚೂರು: ಕಾಮಗಾರಿಗಳ ಹೆಸರಲ್ಲಿ ಲಕ್ಷಾಂತರ ರೂ. ಭ್ರಷ್ಟಾಚಾರ (Corruption) ಮಾಡಿರುವ ಆರೋಪ ಹಿನ್ನೆಲೆ ರಾಯಚೂರಿನ (Raichur) ಮಾನ್ವಿ (Manvi) ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿಯ ಇಬ್ಬರು ಸದಸ್ಯರ (Gram Panchayat Member) ಸದಸ್ಯತ್ವ ಸ್ಥಾನ ರದ್ದುಗೊಳಿಸಲಾಗಿದೆ.
Advertisement
ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಕಾವೇರಿ ಹಾಗೂ ಹಾಲಿ ಅಧ್ಯಕ್ಷೆ ಈರಮ್ಮ ಸದಸ್ಯತ್ವ ರದ್ದುಗೊಳಿಸಲಾಗಿದೆ. ಜೊತೆಗೆ ಮುಂದಿನ 6 ವರ್ಷಗಳವರೆಗೆ ಇಬ್ಬರೂ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಆದೇಶಿಸಲಾಗಿದೆ. 15ನೇ ಹಣಕಾಸಿನ ಯೋಜನೆ ಮಾರ್ಗಸೂಚಿ ಉಲ್ಲಂಘಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಒಟ್ಟು 16.96 ಲಕ್ಷ ರೂ. ಭ್ರಷ್ಟಾಚಾರ ನಡೆದಿದ್ದು ಸಾಬೀತಾಗಿರುವ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯತ್ವ ಸ್ಥಾನ ರದ್ದು ಮಾಡಲಾಗಿದೆ. ಇದನ್ನೂ ಓದಿ: ಶಿವಣ್ಣ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಿಎಂ
Advertisement
Advertisement
ಇನ್ನೂ ಉಟಕನೂರು ಗ್ರಾಪಂ ಪಿಡಿಓ ರಾಮಪ್ಪ ನಡಗೇರಿ ವಿರುದ್ದ ಇಲಾಖೆ ವಿಚಾರಣೆಗೆ ಸೂಚಿಸಿದ್ದು, ವಿಚಾರಣಾ ವರದಿ ಅನ್ವಯ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಸಿಇಓಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಆದೇಶಿಸಿದ್ದಾರೆ. ಇದನ್ನೂ ಓದಿ: ಮೈಸೂರು| SSLC ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು
Advertisement