ಮಂಗಳೂರು: ನದಿಯ ದಡದಲ್ಲಿ ರಾಶಿ ರಾಶಿಯಾಗಿ ಸತ್ತು ಬಿದ್ದಿರೋ ಮೀನುಗಳು. ಕಪ್ಪು ಕಪ್ಪಾಗಿರೋ ನದಿಯ ನೀರು. ಉಸಿರಾಡಲು ಸಾಧ್ಯವಾಗದಷ್ಟು ದುರ್ವಾಸನೆ. ಇದು ಮಂಗಳೂರಿನ ಮಳವೂರಿನಲ್ಲಿರುವ ಫಲ್ಗುಣಿ ನದಿಯ ಕರುಣಾಜನಕ ಸ್ಥಿತಿ.
Advertisement
ಹೌದು. ಈ ನದಿಯಲ್ಲಿದ್ದ ಲಕ್ಷಾಂತರ ಮೀನುಗಳು ದಿನಬೆಳಗಾಗುವುದರೊಳಗೆ ನದಿಯಲ್ಲೇ ಸತ್ತು ದಡಕ್ಕೆ ಬಿದ್ದಿದೆ. ಮಾತ್ರವಲ್ಲ ಮೀನುಗಳು ಅಲ್ಲೇ ಕೊಳೆತು ಹೋದ ಪರಿಣಾಮ ಊರಿಡೀ ದುರ್ವಾಸನೆ ಹಬ್ಬಿದೆ. ಇದಕ್ಕೆಲ್ಲ ಕಾರಣ ಆಗಿರೋದು ಎಂಆರ್‍ಪಿಎಲ್ ಅನ್ನೋ ಪೆಟ್ರೋಲಿಯಂ ಕಂಪನಿ. ಎಂಆರ್‍ಪಿಎಲ್‍ನ ವಿಷಯುಕ್ತ ನೀರೆಲ್ಲಾ ನದಿ ಸೇರ್ತಿರೋದ್ರಿಂದ ನೀರೆಲ್ಲಾ ಕಲುಷಿತಗೊಂಡು ಭಾರೀ ಅನಾಹುತ ಸಂಭವಿಸಿದೆ.
Advertisement
Advertisement
ಕೇವಲ ಜಲಚರಗಳು ಮಾತ್ರವಲ್ಲ, ನದಿ ನೀರು ಕುಡಿದ ದನಕರುಗಳೂ ಸಾವನ್ನಪ್ಪಿದ್ದು ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಅಲ್ಲದೆ ನದಿ ಅಸುಪಾಸಿನ ಬಾವಿ ನೀರು ಕೂಡ ಕಪ್ಪಾಗಿದ್ದು ಕುಡಿಯಲು ಬಾರದಂತಾಗಿದೆ. ಈ ಬಗ್ಗೆ ಸ್ಥಳೀಯರು ಎಷ್ಟೇ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಎಲ್ಲರೂ ಎಂಆರ್‍ಪಿಎಲ್ ಲಾಬಿಗೆ ಮಣಿದಂತಿದೆ ಅಂತಾ ಮೀನುಗಾರ ಶ್ರೀನಿವಾಸ್ ಆರೋಪಿಸಿದ್ದಾರೆ.
Advertisement