ಲಕ್ನೋ: ಲಖೀಂಪುರ್ ರೈತರ ಹತ್ಯಾಕಾಂಡ ಪ್ರಕರಣದಲ್ಲಿ ಕೇಂದ್ರ ಮಂತ್ರಿ ಅಜಯ್ ಮಿಶ್ರಾ ಪುತ್ರ ಅಶೀಶ್ ಮಿಶ್ರಾನನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ) ವಶಕ್ಕೆ ಪಡೆದಿದೆ.
Advertisement
ನಿನ್ನೆ ಉತ್ತರಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದ ಬೆನ್ನಲ್ಲೇ, ಇವತ್ತು ವಿಚಾರಣೆಗೆ ಹಾಜರಾದ ಅಶೀಶ್ ಮಿಶ್ರಾನನ್ನು ವಶಕ್ಕೆ ಪಡೆಯಲಾಗಿದೆ. ಆದರೆ ವಿಚಾರಣೆಯ ಮಾಹಿತಿ ಸೋರಿಕೆ ಆಗೋ ಭಯದಲ್ಲಿ, ಕ್ರೈಂಬ್ರಾಂಚ್ ಕಚೇರಿ ಸುತ್ತಮುತ್ತ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ನಿನ್ನೆ ನನ್ನ ಮಗನಿಗೆ ಆರೋಗ್ಯ ಕೆಟ್ಟಿತ್ತು. ಹೀಗಾಗಿ ವಿಚಾರಣೆಗೆ ಬಂದಿರಲಿಲ್ಲ ಅಷ್ಟೇ. ನೇಪಾಳಕ್ಕೆ ಓಡಿ ಹೋಗಿದ್ದಾನೆ ಅನ್ನೋದೆಲ್ಲಾ ಸುಳ್ಳು. ನನ್ನ ಮಗ ಅಮಾಯಕ ಎಂದು ಕೇಂದ್ರ ಮಂತ್ರಿ ಹೇಳಿದ್ದಾರೆ. ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ
Advertisement
#WATCH | "That was the reaction to the action. There was no planning involved and that doesn't amount to murder," says BKU leader Rakesh Tikait on the killing of three BJP workers during the Lakhimpur Kheri violence pic.twitter.com/se2NViuu2Z
— ANI (@ANI) October 9, 2021
Advertisement
ಈ ಮಧ್ಯೆ, ರೈತರ ಹತ್ಯೆ ಬಳಿಕದ ಹಿಂಸಾಚಾರವನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಸಮರ್ಥಿಸಿಕೊಂಡಿದ್ದು, ರೈತರನ್ನು ಹತ್ಯೆ ಮಾಡಿದಕ್ಕಾಗಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ ಇದು ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂದಿದ್ದಾರೆ. ಇದನ್ನೂ ಓದಿ: ಲಖಿಂಪುರ್ ಸಂತ್ರಸ್ತ ಕುಟುಂಬಗಳಿಗೆ ಹಣ ಬೇಕಿಲ್ಲ, ನ್ಯಾಯ ಬೇಕು: ಪ್ರಿಯಾಂಕಾ ಗಾಂಧಿ
Advertisement