ಬೆಳಗಾವಿ: ಸಿದ್ದರಾಮಯ್ಯ ನಮ್ಮ ಗುರುಗಳು, ಅವರ ಮೇಲೆ ಅಪಾರ ಗೌರವ ಇದೆ. ಅವರೊಬ್ಬರೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು. ಉಳಿದವರು ಸ್ವಯಂ ಘೋಷಿತ ನಾಯಕರು ಎಂದು ಎಂಎಲ್‍ಸಿ ಲಖನ್ ಜಾರಕಿಹೊಳಿ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್‌ಗೆ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆಹ್ವಾನದ ಬಗ್ಗೆ ಯೋಚನೆ ಮಾಡುತ್ತೇನೆ ಎಂದ ಅವರು, ಬಿಜೆಪಿ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಶಕ್ತಿಯನ್ನು ಬಳಸಿಕೊಳ್ಳಬೇಕು. ಜೊತೆಗೆ 2023ರ ಚುನಾವಣೆ ತಯಾರಿ ಮಾಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಸೋತ ನಾಯಕರು ಅಧಿಕಾರಿ ಅನುಭವಿಸಿದ್ದರು. ಮತ್ತೆ ಉನ್ನತ ಹುದ್ದೆ ಪಡೆದು ಡಿಕೆಶಿ ಜೊತೆಗೆ ಸೇರಿ ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ
ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿಗೆ 16 ಅಲ್ಲ 20 ಶಾಸಕರನ್ನು ಕರೆತರುವ ಶಕ್ತಿ ಇದೆ. ರಮೇಶ್ ಜಾರಕಿಹೊಳಿ, ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದರು. ನಾನು ಪಕ್ಷೇತರನಾಗಿ ಉಳಿಯಲು ತೀರ್ಮಾನಿಸಿದ್ದೇನೆ ಎಂದರು.
ಬಿಜೆಪಿ ಸೋಲಿಗೆ ಬಿಜೆಪಿ ನಾಯಕರೇ ಕಾರಣ: ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಟ್ಟರೇ ಜಿಲ್ಲೆಯಲ್ಲಿ ಅನುಕೂಲ ಆಗಲಿದೆ. ಒಬ್ಬರು ಅಥಣಿಯಿಂದ ಸೋತು ಡಿಸಿಎಂ ಆದರು. ಈಗ ಅವರೇ ಕುಳಿತು ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಸೇರಿಕೊಂಡು ಕವಟಗಿಮಠ ಸೋಲಿಸಿದ್ದರು. ಮತ್ತೆ ಅವರೇ ಪ್ರತ್ಯೇಕ ಸಭೆಯನ್ನು ಸಹ ಮಾಡಿದ್ದಾರೆ. ಸೋಲಲು ಕಾರಣರಾದವರಿಗೆ ಉನ್ನತ ಹುದ್ದೆ ನೀಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅಥಣಿ ನಾಯಕರೇ ನೇರ ಕಾರಣ. ಡಿಕೆಶಿ ಜೊತೆಗೂ, ಬಿಜೆಪಿ ಜೊತೆಗೂ ಅವರು ಸಂಪರ್ಕದಲ್ಲಿ ಇದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ
11 ಜನ ಶಾಸಕರು, ಇಬ್ಬರು ಸಂಸದರ ಶಕ್ತಿ ಏನು ಎನ್ನುವುದರ ಕುರಿತು ಹೈಕಮಾಂಡ್ ಚಿಂತನೆ ಮಾಡಬೇಕು. ಈಗಾಗಲೇ ಒಂದು ಕಾಂಗ್ರೆಸ್, ಮತ್ತೊಂದು ಕಾಲು ಬಿಜೆಪಿಯಲ್ಲಿ ಇದ್ದಾರೆ. ಮುಂಜಾನೆ ಒಂದು ಪಾರ್ಟಿ, ಸಂಜೆ ಒಂದು ಪಾರ್ಟಿ. ಪಕ್ಷ ವಿರೋಧಿ ಚಟುವಟಿಕೆ ಮೇಲೆ ಕಣ್ಣು ಇಡಬೇಕು. ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.