ಬೆಳಗಾವಿ: ಕರ್ನಾಟಕ ಪ್ರದೇಶ ಸಿಡಿ ಕಮಿಟಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎಂದು ರಮೇಶ್ ಜಾರಕಿಹೊಳಿ (Ramesh Jarkiholi) ಸಹೋದರ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ (Lakhan Jarkiholi) ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣ ಸಿಬಿಐಗೆ (CBI) ವಹಿಸುವಂತೆ ರಮೇಶ್ ಜಾರಕಿಹೊಳಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿದೆ. ಸಿಬಿಐ ತನಿಖೆ ಒಂದೇ ಪರಿಹಾರವಾಗಿದೆ ಎಂದರು.
Advertisement
Advertisement
ಪರಮೇಶ್ವರ್, ಖರ್ಗೆ, ಸಿದ್ದರಾಮಯ್ಯ ಸಾಹೇಬರು ಇದ್ದಾಗ ಕಾಂಗ್ರೆಸ್ ಬೇರೆ ಇತ್ತು. ಇವರ ಕೈಯಲ್ಲಿ ಬೇರೆ ಇದೆ. ಸಿದ್ದರಾಮಯ್ಯ, ಖರ್ಗೆ ಸಾಹೇಬರು ನಮ್ಮ ಗುರುಗಳು ಅಂತಾ ಒಪ್ಪುತ್ತೇವೆ ಎಂದ ಅವರು, ಈಗ ಸ್ಯಾಂಟ್ರೋ ರವಿ ಅಂತಾ ಏನು ತೋರಿಸುತ್ತಿದ್ದಾರಲ್ಲ. ಅಲ್ಟೋ 800ನಿಂದ ಪ್ರಾರಂಭಿಸಿ ಬಿಎಂಡಬ್ಲ್ಯೂ ಎಕ್ಸ್‌ಯುವಿವರೆಗಿನ ಕಾರು ಇದೆ. ಅವರ ಬಗ್ಗೆ ಕಾಂಗ್ರೆಸ್‍ನಲ್ಲಿ ಯಾರೂ ಮಾತನಾಡಲ್ಲ. ಎಲ್ಲರ ಸಿಡಿ ಇವೆ ಎಂದು ತಿಳಿಸಿದರು.
Advertisement
Advertisement
ಬೆಳಗಾವಿಯಲ್ಲಿ ಸಿಡಿ ಫ್ಯಾಕ್ಟರಿ ಸ್ಟಾರ್ಟ್ ಆಗಿ ಕನಕಪುರದಲ್ಲಿ ರಿಲೀಸ್ ಆಗಿದೆ. ಓಪನ್ ಆಗಿ ಹೇಳಿದ್ರೆ ನಾನು ಆ ಹೆಣ್ಣುಮಗಳು ಈ ಮಗಳು ಅಂತಾರೆ. ಒಂದು ವರ್ಷದಿಂದ ಸಿಬಿಐಗೆ ಕೊಡಬೇಕೆಂಬ ಒತ್ತಾಯ ಇದೆ. ಸಾಕಷ್ಟು ಜನ ಇದರಲ್ಲಿ ನೊಂದು ಬೆಂದು ಬೇಸತ್ತು ಹೋಗಿದ್ದಾರೆ. ಸಿಬಿಐ ತನಿಖೆ ಆಗಬೇಕು. ನಮಗೆ ಜನ ಬೆಂಬಲ ಇದೆ. ಇಂತಹ ನೂರು ಸಿಡಿ ಬಂದರೂ ಹೆದರಲ್ಲ ಎಂದರು. ಇದನ್ನೂ ಓದಿ: ಕುವೈತ್‍ನಲ್ಲಿ ಗೃಹ ಬಂಧನದಲ್ಲಿದ್ದ ಮಹಿಳೆ ಕೊನೆಗೂ ಬಂಧ ಮುಕ್ತ- ಕೊಡಗು ಜಿಲ್ಲಾಡಳಿತದ ಪ್ರಯತ್ನ ಯಶಸ್ವಿ
ಒಂಟಿತೋಳ ಅಂದ್ರು ಒಂಟಿತೋಳ ಏನ್ ಮಾಡಿತು. ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣರಾಗಿದ್ದಾರೆ. ನಾವು ಸಿಂಪಲ್ ಆಗಿಯೇ ಇರ್ತೀವಿ, ಜನ ನಮ್ಮ ಜೊತೆ ಇರ್ತಾರೆ. ವಿಷಕನ್ಯೆ, ಮಟಾಷ್ ಲೆಗ್, ರಕ್ತ ಕಣ್ಣೀರು ಅಂತಾ ಜನ ಮಾತನಾಡ್ತಾರೆ. ಮಟಾಷ್ ಲೆಗ್ ಅಂದ್ರೆ ಕುಮಾರಸ್ವಾಮಿ ಸರ್ಕಾರ ಹೋಯ್ತುಣ್ಣ, ಸಮ್ಮಿಶ್ರ ಸರ್ಕಾರ ಆಯ್ತು. ಆಮೇಲೆ ಇದ್ದಿದ್ದು ರಕ್ತ ಕಣ್ಣೀರು ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧವೂ ಲಖನ್ ಜಾರಕಿಹೊಳಿ ಗುಡುಗಿದರು. ಇದನ್ನೂ ಓದಿ: ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿ: ಜಗನ್ ಮೋಹನ ರೆಡ್ಡಿ ಘೋಷಣೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k