ಮೈಸೂರು: ಗಾಂಜಾ ಮತ್ತು ಮದ್ಯದ ಅಮಲಿನಲ್ಲಿ ಅನುಚಿತವಾಗಿ ವರ್ತಿಸಿದ ಪುಂಡ ಯುವಕನಿಗೆ ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿ ನೀಡಿದ ಸಖತ್ ಗೂಸಾದ ವಿಡಿಯೋ ಈಗ ವೈರಲ್ ಆಗಿದೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಜಲಪಾತದಲ್ಲಿ ಬಳಿ ಈ ಘಟನೆ ನಡೆದಿದೆ. ಜಲಪಾತದ ಬಳಿ ಅರಣ್ಯ ಇಲಾಖೆಯಿಂದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಸಿಬ್ಬಂದಿ ತನ್ನ ಜೊತೆ ಅನುಚಿತವಾಗಿ ವರ್ತಿಸಿದ ಸಾಲೇಕೊಪ್ಪಲು ಗ್ರಾಮದ ಸುನೀಲ್ ಗೆ ಸರಿಯಾಗಿ ಏಟು ನೀಡಿದ್ದಾರೆ.
ಜಲಪಾತದ ಬಳಿ ಸುನೀಲ್ ತನ್ನ ಸ್ನೇಹಿತನ ಜೊತೆ ಗಾಂಜಾ ಹೊಡೆದು ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದನು. ಇದನ್ನು ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಆಗ ಸುನೀಲ್, ಮಹಿಳಾ ಸಿಬ್ಬಂದಿ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಮಹಿಳಾ ಸಿಬ್ಬಂದಿ ಸುನೀಲ್ ಕಪಾಳಕ್ಕೆ ಎರಡು ಬಿಗಿದು ಕೆ.ಆರ್ ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ.