ದರ್ಶನ್ ನೋಡಲು ಮನೆ ಬಳಿ ಕಿಕ್ಕಿರಿದು ಸೇರಿದ ಲೇಡಿಫ್ಯಾನ್ಸ್ !

Public TV
1 Min Read
Darshan Lady Fans

ಸಾಮಾನ್ಯವಾಗಿ ದರ್ಶನ್ (Darshan) ಭಾನುವಾರದ ತಮ್ಮ ದಿನವನ್ನು ಅಭಿಮಾನಿಗಳನ್ನ ಭೇಟಿಯಾಗುವುದಕ್ಕೆ ಮೀಸಲಿಡುತ್ತಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ನಿವಾಸ ಅಭಿಮಾನಿಗಳಿಗೆ ಚಿರಪರಿಚಿತ ಇರುವ ಕಾರಣ ಭಾನುವಾರ ದರ್ಶನ್ ನೋಡೋದಕ್ಕೆ ನೂರಾರು ಅಭಿಮಾನಿಗಳು ಮನೆ ಬಳಿ ಜಮಾಯಿಸುತ್ತಾರೆ. ಈಗಲೂ ಹಾಗೆಯೇ ನಡೆಯುತ್ತಿದೆ.

ಜೈಲಿಂದ ಜಾಮೀನು ಪಡೆದು ಬಂದ ಬಳಿಕ ದರ್ಶನ್ ಹೊಸಕೆರೆಹಳ್ಳಿ ಬಳಿ ಇರುವ ಪತ್ನಿ ವಿಜಯಲಕ್ಷ್ಮಿ ಅಪಾರ್ಟ್‌ಮೆಂಟ್‌ನಲ್ಲಿ ಹೆಚ್ಚಾಗಿ ಇರುತ್ತಾರೆ. ಈ ಭಾನುವಾರ ಆರ್‌ಆರ್ ನಗರದ (RR Nagar) ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ಮನೆಯ ಎದುರು ದರ್ಶನ್ ಭೇಟಿಗಾಗಿ ಕಿಕ್ಕಿರಿದು ಸೇರಿರುವ ಅಭಿಮಾನಿಗಳನ್ನ ದರ್ಶನ್ ಭೇಟಿಯಾಗಿದ್ದಾರೆ. ಮನೆ ಬಳಿ ಬಂದ ಅಭಿಮಾನಿಗಳೆಲ್ಲರಿಗೂ ದರ್ಶನ್ ಶೇಕ್‌ಹ್ಯಾಂಡ್ ಮಾಡಿ ಮಾತನಾಡಿಸಿ ಕಳಿಸಿದ್ದಾರೆ. ವಿಶೇಷ ಅಂದ್ರೆ ಹೆಚ್ಚಾಗಿ ಮಹಿಳಾ ಅಭಿಮಾನಿಗಳೇ ಇದ್ರು.

ದರ್ಶನ್‌ಗೆ ಇರೋ ಭಾರೀ ಬೆಂಬಲವೇ ಅವರ ಅಭಿಮಾನಿಗಳು. ದರ್ಶನ್ ಎಲ್ಲಾ ಕೆಲಸದಲ್ಲೂ ಜೊತೆಯಾಗಿರುತ್ತಾರೆ. ಕೊಲೆ ಆರೋಪ ಹೊತ್ತು ಜೈಲಿಂದ ಬಂದ ಬಳಿಕವೂ ಅವರ ಭಕ್ತಗಣದ ಪ್ರಮಾಣ ಕಮ್ಮಿಯಾಗಿಲ್ಲ. ಇತ್ತೀಚೆಗೆ ಅಭಿಮಾನಿಗಳ ಜೊತೆ ಭೇಟಿಯಾಗೋದನ್ನು ದರ್ಶನ್ ಕಡಿಮೆ ಮಾಡಿದ್ದರು. ಯಾರ ಕೈಗೂ ಸಿಗದಂತೆ ದೂರ ಉಳಿದುಬಿಡುತ್ತಿದ್ದರು. ಆದರೀಗ ಅಪರೂಪಕ್ಕೆ ಮನೆ ಬಳಿ ಬಂದು ಕಾಯುತ್ತಿರುವ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಹಿಂದೆಲ್ಲಾ ತಿಂಗಳಿಗೊಂದು ಭಾನುವಾರ ಅಭಿಮಾನಿಗಳ ಭೇಟಿಗಾಗೇ ದರ್ಶನ್ ಮೀಸಲಿಟ್ಟಿದ್ದರು. ಆದರೆ ಜೈಲಿಗೆ ಹೋಗಿ ಬಂದ ಬಳಿಕ ಸಿನಿಮಾ, ಸಂಸಾರದ ಕಡೆ ಹೆಚ್ಚು ಗಮನ ಕೊಡ್ತಿರುವ ದರ್ಶನ್ ಹೊರಗಿನ ಪ್ರಪಂಚದಲ್ಲಿ ಹೆಚ್ಚು ಬೆರೆಯುತ್ತಿಲ್ಲ.

Share This Article