Connect with us

Districts

ವಿಡಿಯೋ: ಥಿಯೇಟರ್‍ನಲ್ಲಿ ಪೇದೆಯನ್ನೇ ಚುಡಾಯಿಸಿದ- ಲೇಡಿ ಸಿಂಗಂ ಏಟಿಗೆ ತತ್ತರಿಸಿದ ಕಾಮುಕ

Published

on

ಹಾಸನ: ಚಿತ್ರಮಂದಿರದಲ್ಲಿ ಚುಡಾಯಿಸಿದ ಕಾಮುಕನನ್ನು ಮಹಿಳಾ ಪೊಲೀಸೊಬ್ಬರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ನಗರದ ಎಸ್‍ಬಿಜಿ ಚಿತ್ರಮಂದಿರದಲ್ಲಿ ಕಳೆದ ರಾತ್ರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಚಕ್ರವರ್ತಿ’ ಸಿನೆಮಾದ ಸೆಕೆಂಡ್ ಶೊ ನೋಡಲು ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರೋ ಭಾರತಿ ಶುಕ್ರವಾರ ರಾತ್ರಿ `ಚಕ್ರವರ್ತಿ’ ಸಿನೆಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದರು. ಭಾರತಿ ಚಿತ್ರ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಪಕ್ಕದ ಸೀಟ್ ನಲ್ಲಿ ಕುಳಿತ ಕಾಮುಕ ಚೇಷ್ಟೆ ಮಾಡಿದ್ದ. ಈ ವೇಳೆ ಭಾರತಿ ಸರಿಯಾಗಿ ಕುಳಿತುಕೊಳ್ಳುವಂತೆ ವಾರ್ನ್ ಮಾಡಿದ್ರು. ಆದ್ರೆ ಇದನ್ನ ಗಮನಕ್ಕೆ ತೆಗೆದುಕೊಳ್ಳದ ಕಾಮುಕ ತನ್ನ ಚೇಷ್ಟೆಯನ್ನು ಮುಂದುವರೆಸಿದ್ದ.

ಇದರಿಂದ ಸಿಟ್ಟಿಗೆದ್ದ ಭಾರತಿ, ಚಿತ್ರಮಂದಿರದ ಹೊರಕ್ಕೆ ಆತನನ್ನು ಎಳೆದುಕೊಂಡು ಬಂದು ಚೆನ್ನಾಗಿ ಥಳಿಸಿದ್ದಾರೆ. ಕಾಮುಕ ತಾನು ಮಾಡಿದ ಚೇಷ್ಟೆಗೆ ತಪ್ಪೊಪ್ಪಿಕೊಂಡು ಭಾರತಿ ಅವರ ಕಾಲಿಗೂ ಬಿದ್ದಿದ್ದಾನೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಈ ಎಲ್ಲಾ ದೃಶ್ಯಾವಳಿಯನ್ನ ಸ್ಥಳದಲ್ಲಿದ್ದವರೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

https://www.youtube.com/watch?v=5AMBHw0nIk4

Click to comment

Leave a Reply

Your email address will not be published. Required fields are marked *