ಗದಗ: ಅಪಘಾತ ಪ್ರಕರಣದಲ್ಲಿ ದುರುದ್ದೇಶದಿಂದ ಚಾಲಕನ ಬದಲು ನನ್ನ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮನನೊಂದ ನಿರ್ವಾಹಕಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಗದಗದಲ್ಲಿ ನಡೆದಿದೆ.
ನಗರದ ಮುಳಗುಂದ ನಾಕಾ ಬಳಿಯಿರುವ ಬಸ್ ಡಿಪೋದ ಶೌಚಾಲಯದಲ್ಲಿ ಲೇಡಿ ಕಂಡೆಕ್ಟರ್ ಅರುಣಾ ಗಜಕೋಶ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ವೇಳೆ ಅರುಣಾರನ್ನು ನೋಡಿದ ಸಹೋದ್ಯೋಗಿಗಳು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement
ಮೇ 11ರಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದರು. ಅಂದು ಅರುಣಾ ಗಜಕೋಶ ಹಾಗೂ ಚಾಲಕ ವಿ.ವಿ ತೋಟದ್ ಕರ್ತವ್ಯದಲ್ಲಿದ್ದರು. ಅಪಘಾತ ಮಾಡಿದ್ದು, ಚಾಲಕರಾದರೂ ಕ್ರಮ ನನ್ನ ಮೇಲೆ ಕೈಗೊಳ್ಳಲಾಗುತ್ತಿದೆ ಎಂದು ಮನನೊಂದು ಅರುಣಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Advertisement
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಎ ಹಿರೇಮಠ್ ಅವರು, ಚಾಲಕನನ್ನು ರಕ್ಷಿಸಿ ಅರುಣಾ ಮೇಲೆ ದುರುದ್ದೇಶದಿಂದ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆನ್ನೋ ಆರೋಪಗಳು ಕೇಳಿ ಬಂದಿದೆ. ಮೂಲತಃ ಕೊಪ್ಪಳ ಜಿಲ್ಲೆ ಕುಕನೂರಿನವರಾದ ಅರುಣಾ ಈಗ ಗದಗ ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಗದಗ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.