– ಲೇಡಿ ಬೌನ್ಸರ್ ಕಡ್ಡಾಯ!
– ಕಲರ್ ಸಿಸಿಟಿವಿಯಲ್ಲಿ ಸೆರೆಯಾಗುತ್ತೆ ಪಾರ್ಟಿ ಹಾಟ್ ಸ್ಪಾಟ್
ಬೆಂಗಳೂರು: ಹೊಸ ವರ್ಷದ ಆಚರಣೆಯಲ್ಲಿ ಫುಲ್ ಜೇಬು ತುಂಬಿಸಿಕೊಳ್ಳೋ ಮೂಡ್‍ನಲ್ಲಿದ್ದ ಪಬ್, ಬಾರ್‌ಗಳಿಗೆ ಖಾಕಿ ಚೋಕ್ ಕೊಟ್ಟಿದೆ. ಪ್ರತಿ ಪಬ್ ಬಾರ್‌ನಲ್ಲೂ ಲೇಡಿ ಬೌನ್ಸರ್ ಕಡ್ಡಾಯವಾಗಿ ಇರಬೇಕು, ಕಲರ್ ಸಿಸಿಟಿವಿ ಅಳವಡಿಸಬೇಕು ಎಂದು ಕಂಡೀಷನ್ ಹಾಕಿದೆ.
ಜಗಮಗಿಸುವ ಬೆಳಕು, ಮತ್ತೇರಿಸುವ ಡಿಜೆ ಹಾಡಿನ ಸೌಂಡ್, ಕಿಕ್ ಹೊಡೆಸೋಕೆ ಎಣ್ಣೆಯೇಟು ಹೊಸ ವರ್ಷ ಸ್ವಾಗತಿಸೋಕೆ ಇನ್ನೇನು ಬೇಕು ಅಂತಾ ಯೂತ್ಸ್ ಪಬ್‍ನ ಮೆಟ್ಟಿಲು ಹತ್ತೋದು ಕಾಮನ್. ಈ ಹಿಂದೆ ಹೊಸ ವರ್ಷದಲ್ಲಿ ಕಾಮುಕರ ಕಾಟದಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬಂದಿತ್ತು. ಆದ್ದರಿಂದ ಈ ಕಹಿ ಘಟನೆಗಳಿಗೆ ಬ್ರೇಕ್ ಹಾಕಲು ಖಾಕಿ ಪಡೆ ಈ ಬಾರಿ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ನ್ಯೂ ಇಯರ್ ಈವೆಂಟ್ ಮಾಡುವ ಆಯೋಜಕರಿಗೆ ಕಠಿಣ ಕಂಡೀಷನ್ ಹಾಕಿದ್ದಾರೆ.
Advertisement
Advertisement
ಪ್ರತಿ ಪಬ್‍ನಲ್ಲಿ ಹಾಗೂ ಈವೆಂಟ್‍ನಲ್ಲೂ ಲೇಡಿ ಬೌನ್ಸರ್ ಕಡ್ಡಾಯವಾಗಿದೆ. ಮಿನಿಮಂ ಇಪ್ಪತ್ತು ಜನವಾದ್ರೂ ಬೌನ್ಸರ್ಸ್ ಇರಲೇಬೇಕು ಅಂತಾ ಹೇಳಿದೆ. ಖಾಕಿ ಕಂಡೀಷನ್‍ಗೆ ಸುಸ್ತು ಹೊಡೆದಿರುವ ಪಬ್ ಮಾಲೀಕರು ಈಗ ಲೇಡಿ ಬೌನ್ಸರ್ ಎಲ್ಲಿ ಹುಡುಕೋಕೆ ಹೋಗೋಣ ಅಂತಾ ತಡಕಾಡುತ್ತಿದ್ದಾರೆ. ಆದಕ್ಕಾಗಿ ಹೊರ ರಾಜ್ಯದ ಬೌನ್ಸರ್‌ಗಳನ್ನು ಕರೆಸಿಕೊಳ್ಳಲು ಸಜ್ಜಾಗಿದ್ದಾರೆ.
Advertisement
Advertisement
ಇನ್ನು ಪಬ್‍ಗಳ ಸುತ್ತಮುತ್ತಾ ರಸ್ತೆಗೆ ಸ್ಪೆಷಲ್ ಎಫೆಕ್ಟ್ ಇರುವ ಬೀದಿ ದೀಪ ಆಳವಡಿಸಬೇಕು. ಅಲ್ಲದೇ ಪಾರ್ಟಿ ಹಾಟ್ ಸ್ಪಾಟ್ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಕಲರ್ ಸಿಸಿ ಟಿವಿ ಅಳವಡಿಸಲೇಬೇಕು. ಆಗ ಅಹಿತಕರ ಘಟನೆಗಳಿಗೆ ಕಡಿವಾಣ ಬೀಳೋದರ ಜೊತೆಗೆ ಕಿರಿಕ್ ಪಾರ್ಟಿಗಳು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡು ಹೋಗೋಕೆ ಸಾಧ್ಯವಿಲ್ಲ ಎಂದು ಪೊಲೀಸರು ಈ ಕಂಡೀಷನ್ ಹಾಕಿದ್ದಾರೆ.
ಒಟ್ಟಿನಲ್ಲಿ ಹೊಸ ವರ್ಷದ ಆಚರಣೆಗೆ ಕಾನೂನು ಕಠಿಣವಾದಷ್ಟು ಒಳ್ಳೆಯದೇ. ಸಂಭ್ರಮ ಸಡಗರದಿಂದ ಹೊಸ ವರ್ಷವನ್ನು ಸ್ವಾಗತಿಸೋಣ. ಒಂದು ದಿನದ ಸಂಭ್ರಮ ಇಡೀ ವರ್ಷದ ಮೂಡ್ ಕೆಟ್ಟುಹೋಗಬಾರದು ಅಂತ ಖಾಕಿ ಪಡೆ ಈ ಹೊಸ ರೂಲ್ಸ್ ತಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv