– 22 ವರ್ಷದ ಯುವತಿಯಿಂದ 80 ವರ್ಷದ ವೃದ್ಧೆಯರಿಗೆ ಪ್ರವೇಶ
ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಕ್ಲಬ್, ಪಬ್ ಪ್ರಿಯರು. ರಾಜಧಾನಿಯಲ್ಲಿ ಕತ್ತಲಾದರೆ ಸಾಕು ರಂಗಿನ ಲೋಕ ತೆರೆದುಕೊಳ್ಳುತ್ತೆ. ಪಬ್, ಕ್ಲಬ್‍ಗೆ ಹೋಗಬೇಕೆಂಬ ಆಸೆ ಹುಡುಗಿಯರಿಗೆ ಇರುತ್ತೆ. ಆದರೆ ಇಲ್ಲಿ ಸ್ಥಳಗಳಲ್ಲಿ ರಕ್ಷಣೆ ಇಲ್ಲ ಎಂಬ ಕಾರಣಕ್ಕಾಗಿ ಬಹುತೇಕ ಹುಡುಗಿಯರು ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಈ ಚಿಂತೆ ಹೋಗಲಾಡಿಸೋಕೆ ಬೆಂಗಳೂರಲ್ಲಿ ಲೇಡಿಸ್ ಬಾರ್‌ವೊಂದು ಓಪನ್ ಆಗಲಿದೆ.
ಮಹಿಳೆಯರಿಂದ, ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ ಬಾರ್‌ವೊಂದು ತಲೆಯೆತ್ತಲಿದೆ. ನಗರದ ಬ್ರಿಗೇಡ್ ರಸ್ತೆಯಲ್ಲಿ ‘ಮಿಸ್ ಆ್ಯಂಡ್ ಮಿಸೆಸ್ ರೆಸ್ಟೋರೆಂಟ್ ಮತ್ತು ಲಾಂಜ್ ಬಾರ್’ ಹೆಸರಿನ ಬಾರ್ ಆರಂಭಗೊಳ್ಳಲಿದೆ. ಇಲ್ಲಿ ಮಾಲೀಕರಿಂದ ಬೌನ್ಸರ್‌ವರೆಗೆ, ವ್ಯಾಲೆಟ್ ಪಾರ್ಕಿಂಗ್, ಕ್ಯಾಷಿಯರ್, ಬಾಣಸಿಗರು, ಸಫ್ಲೈಯರ್‌ವರೆಗೆ ಎಲ್ಲರೂ ಮಹಿಳೆಯರೇ. ಇಲ್ಲಿ ಒಬ್ಬನೇ ಒಬ್ಬ ಪುರುಷನಿಗೂ ಎಂಟ್ರಿಯಿಲ್ಲ. ಇದು ಮಹಿಳಾ ದಿನಾಚರಣೆಗಿಂತ ಮೊದಲು ಅಂದರೆ ಮಾರ್ಚ್ 6 ಅಥವಾ 7 ರಂದು ಉದ್ಘಾಟನೆಗೊಳ್ಳಲಿದೆ.
Advertisement
Advertisement
ಪಂಜೂರಿ ವಿ.ಶಂಕರ್, ಅಂಕಿತಾ ಶೆಟ್ಟಿ, ಅರುಣಾ ಶ್ರೀಧರ್, ಸಹನಾ ಸಂಪತ್, ಆಶಾ ಹೆಗಡೆ ಹಾಗೂ ಸೌಮ್ಯಾ ಶ್ರೀನಿವಾಸ್ ಸೇರಿದ ಮಹಿಳಾ ತಂಡ ಈ ಹೋಟೆಲ್‍ನ ಪರಿಕಲ್ಪನೆಯನ್ನು ಹೊರತಂದಿದೆ. ಇನ್ನೂ ಈ ಬಾರ್‌ಗೆ 22 ವರ್ಷದ ಯುವತಿಯಿಂದ ಹಿಡಿದು 80 ವರ್ಷದವರೆಗಿನ ವೃದ್ಧೆಯರಿಗೆ ಪ್ರವೇಶವಿದೆ. ಇಲ್ಲಿ ಕುಡಿಯುವುದರ ಜೊತೆಗೆ ಸ್ಪಾ, ನೇಲ್ ಆರ್ಟ್, ಪೆಡಿಕ್ಯೂರ್, ಲೆಗ್ ಮಸಾಜ್ ಸೇರಿದಂತೆ ಹಲವು ಸೇವೆಗಳಿವೆ.
Advertisement
ಪ್ರತಿ ದಿನ ಮಧ್ಯಾಹ್ನ 12ರಿಂದ ತಡರಾತ್ರಿ 1ರವರೆಗೂ ಕಾರ್ಯ ನಿರ್ವಹಿಸಲಿದೆ. ಮಹಿಳೆಯರ ರಕ್ಷಣೆಗಾಗಿ ತಡರಾತ್ರಿ ಕ್ಯಾಬ್ ಬುಕ್ ಮಾಡಿ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯಾರಾದರೂ ಪುರುಷರು ತೊಂದರೆ ಕೊಟ್ಟರೇ ಬೌನ್ಸರ್‌ಗಳಿಂದ ಹೊಡೆತ ತಿನ್ನಬೇಕಾಗುತ್ತದೆ. ಈ ಬಾರಿನಲ್ಲಿ ಲೇಡಿಸ್ ಹುಡುಗರ ಮುಜುಗರವಿಲ್ಲದೇ ಆರಾಮಾಗಿ ಏಂಜಾಯ್ ಮಾಡಬಹುದಾಗಿದೆ.