ಹೈದರಾಬಾದ್: ಬಾಲಾಪುರ ಗಣೇಶನ 21 ಕೆ.ಜಿ ತೂಕದ ಫೇಮಸ್ ಲಡ್ಡು ಭಾನುವಾರ 18.90 ಲಕ್ಷ ರೂಪಾಯಿಗೆ ಹರಾಜು ಹಾಕಲಾಯಿತು.
ತೆಲಂಗಾಣದ ನಾದಾರ್‌ಗುಲ್ ಎಂಬಲ್ಲಿನ ಉದ್ಯಮಿ ಮರಿ ಶಶಾನ್ ರೆಡ್ಡಿಯಿಂದ ಈ ಲಡ್ಡುವನ್ನು ಆಂಧ್ರಪ್ರದೇಶದ ವಿಧಾನಪರಿಷತ್ ಸದಸ್ಯ ರಮೇಶ್ ಯಾದವ್ ಖರೀದಿಸಿದರು. ಮೊದಲಿಗೆ 1,116ರೂ. ಯಿಂದ ಆರಂಭವಾದ ಹರಾಜು ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ನೂರರು ಭಕ್ತರ ಮಧ್ಯೆ ಅಧಿಕ ಮೊತ್ತಕ್ಕೆ ಹರಾಜಾಯಿತು. ಈ ಲಡ್ಡುವನ್ನು ಯಾದವ್ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್. ಜಗನ್ ಮೋಹನ್ ರೆಡ್ಡಿಗೆ ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದರು.
Advertisement
Advertisement
2019ರಲ್ಲಿ 17.60 ಲಕ್ಷ ರೂ.ಗೆ ಲಡ್ಡು ಖರೀದಿಸಿದ ಉದ್ಯಮಿ ಮತ್ತು ಕೃಷಿಕ ಕೊಲನು ರಾಮ್ ರೆಡ್ಡಿ ಸಹ ಈ ವರ್ಷ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜನ್ನು ವೀಕ್ಷಿಸಲು ರಾಜ್ಯ ಶಿಕ್ಷಣ ಸಚಿವ. ಪಿ. ಸಬಿತಾ ಇಂದ್ರ ರೆಡ್ಡಿ, ಮಾಜಿ ಶಾಸಕ ಟಿ.ಕೃಷ್ಣ ರೆಡ್ಡಿ ಮತ್ತು ಹಲವಾರು ರಾಜಕಾರಣಿಗಳು ಹಾಜರಿದ್ದರು. ಇದನ್ನೂ ಓದಿ: ಅನುಮತಿ ಇಲ್ಲದೇ ಬಿಸಿಯೂಟದ ಕೋಣೆ ನೆಲಸಮ – ಅಧ್ಯಕ್ಷನ ದರ್ಪಕ್ಕೆ ಗ್ರಾಮಸ್ಥರ ಆಕ್ರೋಶ
Advertisement
ನಗರದ ಹೊರವಲಯದಲ್ಲಿರುವ ಬಾಲಾಪುರ ಗ್ರಾಮದಲ್ಲಿ ಪ್ರತಿ ವರ್ಷ ಗಣೇಶ ವಿಸರ್ಜನೆಯ ಸಮಯದಲ್ಲಿ ಲಡ್ಡುವನ್ನು ಮೆರವಣಿಗೆ ಮಾಡಲಾಗುತ್ತದೆ. ಪ್ರತಿ ವರ್ಷ ಹರಾಜನ್ನು ಆಯೋಜಿಸುವ ಬಾಲಪುರ ಗಣೇಶ ಉತ್ಸವ ಸಮಿತಿಯ ಪ್ರಕಾರ 1994ರಲ್ಲಿ ನಡೆದ ಮೊದಲ ಹರಾಜಿನಲ್ಲಿ 450 ರೂ.ಗೆ ಲಡ್ಡು ಮಾರಾಟವಾಗಿತ್ತು.
Advertisement
ಅಂದಿನಿಂದ ಈ ಸಿಹಿ ಲಡ್ಡು ಫೇಮಸ್ ಹಾಗೂ ದುಬಾರಿ ಬೆಲೆಯನ್ನು ಹೊಂದಿದೆ. ಅಲ್ಲದೇ ವಿಜೇತರಿಗೆ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಉದ್ಯಮಿಗಳು ಹಾಗೂ ರಾಜಕಾರಣಿಗಳು ಪ್ರತಿ ವರ್ಷ ಈ ಲಡ್ಡುಗಾಗಿ ಪರಸ್ಪರ ಪೈಪೋಟಿ ನಡೆಸುತ್ತಾರೆ. 2018ರಲ್ಲಿ 16.60 ಲಕ್ಷ ರೂ.ಗೆ ಈ ಲಡ್ಡು ಹರಾಜಾಗಿತ್ತು. ಆದರೆ ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಾರ್ವಜನಿಕ ಆಚರಣೆಗಳಿಲ್ಲದ ಕಾರಣ ಹರಾಜನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ