-‘ಬಿಜೆಪಿ ಸೇರ್ಕೊಳ್ಳಿ’ ಅಂತ ಬರೆದು ಟ್ಟೀಟ್
ನವದೆಹಲಿ: ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರನ್ನು ಬಿಜೆಪಿ ಸೇರಿಸಿಕೊಳ್ಳಲು ಲಡಾಖ್ ಸಂಸದ ಜಮ್‍ಯಾಂಗ್ ಟ್ಸೆರಿಂಗ್ ನಮ್‍ಯಾಂಗ್ ಕನ್ನಡ ಕಲಿತಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರದ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಮಂಗಳವಾರ ಸಂಸತ್ತಿನ ಪ್ರಕ್ರಿಯೆಗಳು ಅಸ್ತವ್ಯಸ್ತಗೊಂಡವು. ಆದರೆ ರಾಜಕೀಯ ಪ್ರತಿಸ್ಪರ್ಧಿಗಳಲ್ಲಿ ಇನ್ನೂ ಸ್ನೇಹ ಇದೆ ಎಂದು ಬಿಜೆಪಿ ಸಂಸದರು ತೋರಿಸಿದ್ದಾರೆ. ಲಡಾಖ್ ಸಂಸದ ಜಮ್‍ಯಾಂಗ್ ಟ್ಸೆರಿಂಗ್ ನಮ್‍ಯಾಂಗ್ ಅವರು ಕರ್ನಾಟಕದ ಮೂವರು ಸಂಸದರೊಂದಿಗೆ ಇರುವ ಫೋಟೋವನ್ನು ಮಂಗಳವಾರ ಟ್ವೀಟ್ ಮಾಡಿದ್ದಾರೆ.
Advertisement
Awesome Sir ???? Valle prayatna!
— Kashyap Kadagattur ???????? (@iamkash_kr) March 3, 2020
Advertisement
ಸಂಸದ ನಮ್‍ಯಾಂಗ್ ಅವರಿಗೆ ಕರ್ನಾಟಕದ ಮೂವರು ಸಂಸದರು ಕನ್ನಡ ಕಲಿಸಿದ್ದಾರೆ. ಆದರೆ ಕನ್ನಡ ಕಲಿತ ನಮ್‍ಯಾಂಗ್ ಡಿಕೆ ಸುರೇಶ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಫೋಟೋದಲ್ಲಿ ನಮ್‍ಯಾಂಗ್ ಅವರು ಕರ್ನಾಟಕದ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹಾ, ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರು ಎಷ್ಟು ಕನ್ನಡ ಕಲಿತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಕಾಂಗ್ರೆಸ್ ಸಂಸದರಿಗೆ ಹೇಳಲು ಸಾಕಷ್ಟು ಕಲಿತಿದ್ದೇನೆ ಎಂದು ನಮ್‍ಯಾಂಗ್ ಹೇಳಿದ್ದಾರೆ. ನಾನು ಡಿ.ಕೆ.ಸುರೇಶ್ ಅವರಿಗೆ ‘ಬಿಜೆಪಿ ಸೇರಿಕೊಳ್ಳಿ’ ಅಂತ ಹೇಳಿದೆ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.
Advertisement
— karthik nayak (@karthiknayak1) March 3, 2020
ವಿಶೇಷವೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಗೆದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಆಗಿದ್ದಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರ, ಪಕ್ಷೇತರ ಅಭ್ಯರ್ಥಿ ಹಾಗೂ ಜೆಡಿಎಸ್ ಅಭ್ಯರ್ಥಿ ತಲಾ ಒಂದು ಕ್ಷೇತ್ರದಲ್ಲಿ ಗೆದ್ದಿದ್ದರು.
ಸಂಸದ ನಮ್‍ಯಾಂಗ್ ಅವರ ಟ್ವೀಟ್ ಭಾರೀ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದು, ಕೆಲ ನೆಟ್ಟಿಗರು ಸೂಪರ್ ಸರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು, ‘ಈ ಪುಣ್ಯಾತ್ಮ ಪೂರ್ತಿ ಕನ್ನಡ ಕಲಿಯೋದು ಬೇಡ ದೇವ್ರೇ. ಮಾತಾಡಿ ಮಾತಾಡಿನೇ ಎಲ್ಲರನ್ನೂ ಬಿಜೆಪಿಗೆ ಸೇರಿಸುವ ಹಾಗೆ ಮಾಡಿ ಬಿಡ್ತಾನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
Ouch!
Even in your learning stage you are approaching him to Join BJP Saying BJP Serikolli,
Meanwhile DKS,
ಈ ಪುಣ್ಯಾತ್ಮ ಪೂರ್ತಿ ಕನ್ನಡ ಕಲಿಯೋದು ಬೇಡ ದೇವ್ರೇ. ಮಾತಾಡಿ ಮಾತಾಡಿನೇ ಎಲ್ಲರನ್ನೂ BJP ಗೆ ಸೇರೋ ಹಾಗೆ ಮಾಡಿ ಬಿಡ್ತಾನೆ! ???? ????
— Shruthi Thumbri ???????? (@Shruthi_Thumbri) March 3, 2020