ಬೆಂಗಳೂರು: ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ ಇದು. ಈ ಯೋಜನೆ ಜಾರಿಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು ಬಿಬಿಎಂಪಿ (BBMP) ಹೊಸ ಹೊಸ ಪ್ಲಾನ್ ಮಾಡಿದೆ. ಈ ವಿಶೇಷ ಸೌಲಭ್ಯ ನೀಡಲು ಪಾಲಿಕೆ ಸರ್ಕಾರಕ್ಕೆ ಪತ್ರ ಬರೆದಿದೆ.
Advertisement
ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ ನಮ್ಮ ಕ್ಲಿನಿಕ್ (Namma Clinic) ಆರಂಭ ಬೆಂಗಳೂರಿನಲ್ಲಿ ತಡ ಆಗ್ತಿದೆ. ಡಿಸೆಂಬರ್ 2ನೇ ವಾರದಿಂದ ರಾಜ್ಯದಲ್ಲಿ 114 ಕಡೆ ನಮ್ಮ ಕ್ಲಿನಿಕ್ ಆರಂಭ ಆಗಿದೆ. ಆದರೆ ಬೆಂಗಳೂರಿನಲ್ಲಿ ಜಾಗದ ಕೊರತೆ ಮತ್ತು ಸಿಬ್ಬಂದಿ ಕೊರತೆಯಿಂದ ಯೋಜನೆ ಜಾರಿ ನಿಧಾನವಾಗ್ತಿದೆ. ಇದೀಗ ಜಾಗ ಸಿಕ್ಕಿದ್ರೂ ನಮ್ಮ ಕ್ಲಿನಿಕ್‍ಗೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸಿಬ್ಬಂದಿಯೇ ಸಿಕ್ತಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಬೆಕ್ಕುಗಳ ಕಾಟ- ಬೆಕ್ಕಿಗೂ ಸಂತಾನಹರಣ ಚಿಕಿತ್ಸೆ ಮಾಡಲು ಮನವಿ
Advertisement
Advertisement
ಬಿಬಿಎಂಪಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಸಿಬ್ಬಂದಿಯನ್ನ ನೇಮಕ ಮಾಡಿಕೊಳ್ತಿದ್ರೂ ನಮ್ಮ ಕ್ಲಿನಿಕ್‍ಗಳಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಬಿಬಿಎಂಪಿಗೆ ಸವಾಲಾಗಿದೆ. ಸರ್ಕಾರಕ್ಕೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಪತ್ರ ಬರೆದಿದೆ. ಸರ್ಕಾರಿ ಕೋಟಾದಡಿ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡ್ತಾ ಇರುವವರನ್ನ ಒಂದು ವರ್ಷದ ಮಟ್ಟಿಗೆ ನಮ್ಮ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕೊಡಿ. ವೈದ್ಯಕೀಯ ಕೋರ್ಸ್ (Medical Course) ಮುಗಿಸಿರೋ ವೈದ್ಯರನ್ನ ನೀಡಲು ಪತ್ರ ಬರೆಯಲಾಗಿದ್ಯಂತೆ. ಇದಕ್ಕೆ ಸರ್ಕಾರ ಸ್ಪಂದಿಸಿದ್ದು ವೈದ್ಯರನ್ನ ನೀಡುವ ಭರವಸೆ ನೀಡಿದೆಯಂತೆ.
Advertisement
ಗುತ್ತಿಗೆ ಅಧಾರದ ಮೇಲೆ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ನೀಟ್ ಪರೀಕ್ಷೆ ಕೂಡ ಅಡ್ಡಿ ಆಗ್ತಿದ್ಯಂತೆ. ನೀಟ್ ಪರೀಕ್ಷೆಗೆ ರೆಡಿಯಾಗ್ತಿರೋ ವೈದ್ಯಕೀಯ ವಿದ್ಯಾರ್ಥಿಗಳು ಯಾರು ನಮ್ಮ ಕ್ಲಿನಿಕ್‍ಗಳಲ್ಲಿ ಕೆಲಸ ಮಾಡಲು ಮುಂದಾಗ್ತಾ ಇಲ್ವಂತೆ ಜೊತೆಗೆ ಉದ್ಯೋಗ (Job) ಖಾಲಿ ಇದೆ ಬನ್ನಿ ಅಂದರು ಬರ್ತಾ ಇಲ್ವಂತೆ. ಹೀಗಾಗಿ ಸರ್ಕಾರಿ ಕೋಟಾದ ವೈದ್ಯರ ಮೊರೆ ಹೋಗಿದ್ದು ಜನವರಿ ಅಂತ್ಯದ ಒಳಗೆ ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಆರಂಭಕ್ಕೆ ಮುಂದಾಗಿರುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಹೇಳಿದ್ದಾರೆ.
ಒಟ್ಟಾರೆ ನಮ್ಮ ಕ್ಲಿನಿಕ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿ ನೇಮಕಕ್ಕೆ ಬಿಬಿಎಂಪಿ ಹರಸಾಹಸ ಪಡುತ್ತಿದ್ದು, ಜನವರಿಯಲ್ಲೇ ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಆರಂಭ ಆಗುತ್ತಾ ಇಲ್ಲ ಮತ್ತಷ್ಟು ದಿನಕ್ಕೆ ಮುಂದೂಡಲಾಗುತ್ತಾ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k