ಬೆಂಗಳೂರು: ಮಣ್ಣು ಕುಸಿದ ಪರಿಣಾಮ ಕೂಲಿ ಅರಸಿ ದೂರದೂರಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕೆಂಗೇರಿಯ ಕೆಂಪೇಗೌಡ ಲೇಔಟ್‍ನ ಹೊಸ ಬೈರೊಹಳ್ಳಿಯಲ್ಲಿ ನಡೆದಿದೆ.
ಕರಿಯಪ್ಪ ಮತ್ತು ನಿಖಿಲೇಶ್ ಮೃತ ಕಾರ್ಮಿಕರು. ಸ್ಯಾನಿಟರಿ ಪೈಪ್ ಅಳವಡಿಸಲು ಗುಂಡಿ ತೆಗೆಯಲಾಗಿತ್ತು. 12 ಅಡಿ ಉದ್ದದ ಗುಂಡಿ ತೋಡಿ ಅಲ್ಲಿ ಪೈಪ್‍ಗಳನ್ನ ಜೋಡಿಸಿ ಕೆಲಸ ಮಾಡಲಾಗುತ್ತಿತ್ತು. ದುರದೃಷ್ಟ ಮೇಲಿಂದ ಕುಸಿದು ಬಿದ್ದ ಮಣ್ಣು ಇಬ್ಬರು ಕಾರ್ಮಿಕರನ್ನು ಮುಚ್ಚಿ ಹಾಕಿತ್ತು. ತಕ್ಷಣ ಸ್ಥಳೀಯರು ಕರಿಯಪ್ಪನ ಮೇಲಿದ್ದ ಮಣ್ಣು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು.
Advertisement
Advertisement
ಮತ್ತೊಬ್ಬ ಕಾರ್ಮಿಕ ನಿಖಿಲೇಶ್‍ನನ್ನ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು ಹೊರತೆಗೆಯುವಷ್ಟರಲ್ಲಿ ನಿಖಿಲೇಶ್ ಮೃತಪಟ್ಟಿದ್ದನು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕರಿಯಪ್ಪ ಕೂಡ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ದಳದವರು 12 ಅಡಿ ಆಳದಿಂದ ಮಣ್ಣನ್ನು ಹೊರತೆಗೆದು ರಕ್ಷಿಸುವಷ್ಟರಲ್ಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
Advertisement
ಕರಿಯಪ್ಪ ಮತ್ತು ನಿಖಿಲೇಶ್ ಆಂಧ್ರ ಮತ್ತು ಬಿಹಾರದಿಂದ ಕೂಲಿಗಾಗಿ ಬಂದಿದ್ದರು. ಸದ್ಯ ಈ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಗುತ್ತಿಗೆ ಪಡೆದ ಏಜೆನ್ಸಿ ವಿರುದ್ಧ ನಿರ್ಲಕ್ಷ್ಯದಡಿ ಪ್ರಕರಣ ದಾಖಲಿಸಲಾಗಿದೆ.