ಡೆಹ್ರಾಡೂನ್: ತನ್ನ ಮನಸ್ಸಿನ ಮಾತು ಕೇಳಿ, ದೇಶ ಸೇವೆ ಮಾಡಲು ಅಮೆರಿಕ ಕಂಪನಿ ನೀಡಿದ ಕೆಲಸ ತೊರೆದು ಯುವಕನೊಬ್ಬ ಭಾರತೀಯ ಸೈನ್ಯವನ್ನು ಸೇರಿದ್ದಾರೆ.
ಬರ್ನಾನ ಯಾದಗಿರಿ ಎಂಬವರೇ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇರಿರುವ ಯುವಕನಾಗಿದ್ದು, ಶನಿವಾರ ಡೆಹ್ರಾಡೂನ್‍ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ ತರಬೇತಿ ಪೂರ್ಣಗೊಳಿಸಿ ಸೇನೆಯ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
Advertisement
Advertisement
ಬರ್ನಾನ ಯಾದಗಿರಿ ಅವರ ತಂದೆ ಬರ್ನಾನ ಗುನ್ನಯ್ಯ ಹಲವು ವರ್ಷಗಳಿಂದ ಹೈದರಾಬಾದ್‍ನ ಸಿಮೆಂಟ್ ಕಾರ್ಖಾನೆಯಲ್ಲಿ 100 ರೂ. ಪಡೆದು ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು.
Advertisement
ಡೆಹ್ರಾಡೂನ್ ನಲ್ಲಿ ಶನಿವಾರ ನಡೆದ ಪರೇಡ್ ನಂತರ ಮಾತನಾಡಿದ ಬರ್ನಾನ್ ತನ್ನ ತಂದೆ ತುಂಬ ಸರಳ ವ್ಯಕ್ತಿಯಾಗಿದ್ದು, ನಾನು ಮಿಲಿಟರಿಯಲ್ಲಿ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿರುವುದಾಗಿ ತಿಳಿದಿದ್ದಾರೆ. ಆದರೆ ಮಿಲಿಟರಿ ಅಧಿಕಾರಿಯಾಗಿ ನೇಮಕಗೊಂಡಿದ್ದೇನೆ. ಆದರೆ ನಮ್ಮ ಪೋಷಕರು ಉತ್ತಮ ಸಂಬಳ ದೊರೆಯುವ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಸೈನ್ಯಕ್ಕೆ ಸೇರಿ ತಪ್ಪು ಮಾಡುತ್ತಿದ್ದೀಯಾ ಎಂದು ಎಚ್ಚರಿಸಿದರು. ಆದರೆ ನಾನು ಇಷ್ಟಪಟ್ಟಿದ್ದರೆ ಕಾರ್ಪೋರೆಟ್ ಸಂಸ್ಥೆಯಲ್ಲಿ ಕೆಲಸ ಪಡೆದು ಉತ್ತಮ ಸಂಬಳ ಪಡೆಯಬಹುದಿತ್ತು. ಆದರೆ ನನಗೆ ಸೈನ್ಯದಲ್ಲಿ ಸೇರಿ ಸೇವೆ ಮಾಡಬೇಕೆಂಬ ಕನಸು ಕಂಡಿದ್ದೆ ಅದನ್ನು ಸಾಧಿಸಿದ್ದೇನೆ. ಸೈನ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ನನ್ನ ಕರ್ತವ್ಯಗಳನ್ನು ಪಾಲಿಸುತ್ತೇನೆ ಎಂದರು.
Advertisement
ಅಂದಹಾಗೇ, ಬರ್ನಾನ ಯಾದಗಿರಿ ಬಾಲ್ಯದಿಂದಲೂ ಕಡು ಬಡತನದಲ್ಲಿ ಬೆಳೆದ ಯುವಕ, ವಿದ್ಯಾಬ್ಯಾಸ ಸಮಯದಲ್ಲಿ ಸರ್ಕಾರ ನೀಡುವ ಪ್ರೋತ್ಸಹ ಹಣದಲ್ಲೇ ಪದವಿ ಪಡೆದವರು. ಅದರೂ ದೇಶ ಸೇವೆ ಮಾಡಬೇಕೆಂಬ ಕನಸಿನಿಂದ ಇಂಜಿನಿಯರ್ ಪದವಿ ಪಡೆದು, ಕ್ಯಾಟ್ (ಸಿಎಟಿ) ಪರೀಕ್ಷೆಯಲ್ಲಿ ಶೇ.93.4 ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೇ ಅಮೆರಿಕದ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನೀಡಿದ ಉದ್ಯೋಗವನ್ನು ನಿರಾಕರಿಸಿದ್ದಾರೆ. ಇಂದೋರ್ ನ ಐಐಎಂ ಸಂಸ್ಥೆಯು ಇವರಿಗೆ ಉದ್ಯೋಗ ನೀಡಿತ್ತು.
ತಮ್ಮ ಮಗ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸೈನ್ಯದ ಸಮವಸ್ತ್ರ ಧರಿಸಿದನ್ನು ಕಂಡು ತಂದೆ ಬರ್ನಾನ ಗುನ್ನಯ್ಯ ಅವರ ಕಣ್ಣುಗಳು ಸಂತೋಷ ತುಂಬಿ ಬಂದಿತ್ತು.