Bengaluru RuralDistrictsKarnatakaLatestMain Post

ಬಟ್ಟೆ ಒಣಗಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ನೆಲಮಂಗಲ: ಬಟ್ಟೆ ಒಣಗಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆಯಲ್ಲಿ ನಡೆದಿದೆ.

ಉತ್ತರಪ್ರದೇಶದ ಮೂಲದ ಅಜಯ್ ಚೌಹಾಣ್ (35) ಮೃತ ಕಾರ್ಮಿಕ. ಸಹದ್ಯೋಗಿ ಸುನಿಲ್ ಚೌಹಾಣ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಬಿಲ್ಲಿನಕೋಟೆಯ ವಿ.ಆರ್.ಎಲ್ ಗೋಧಾಮಿನಲ್ಲಿ ಕೆಲಸದಲ್ಲಿದ್ದ ಕಾರ್ಮಿಕರು, ಭಾನುವಾರ ರಜೆಯಾದ್ದರಿಂದ ಸ್ವಚ್ಛತೆಯಲ್ಲಿ ತೊಡಗಿದ್ದ ವೇಳೆಯಲ್ಲಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ

ಗುತ್ತಿಗೆದಾರ ಗುಲಾಬ್, ಈ ಕಾರ್ಮಿಕರಿಗೆ ಆಶ್ರಯ ನೀಡಿದ್ದ ಎನ್ನಲಾಗಿದ್ದು, ಮೂಲಭೂತ ಸೌಕರ್ಯ ಸೂಕ್ತವಾಗಿ ಒದಗಿಸದೇ ಇದ್ದ ಹಿನ್ನಲೆಯಲ್ಲಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಶವವನ್ನು ಡಾಬಸ್ ಪೇಟೆ ಶವಾಗಾರದಲ್ಲಿ ಇರಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಮೃತ ದೇಹ ಹಸ್ತಾಂತರಿಸಲಿದ್ದಾರೆ. ಇದನ್ನೂ ಓದಿ: ಲವ್ ಕೇಸರಿಗೆ ಕರೆಕೊಟ್ಟು ಪ್ರಚೋದನಕಾರಿ ಭಾಷಣ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

Leave a Reply

Your email address will not be published.

Back to top button