ಮೊಬೈಲ್ ರಿಪೇರಿ ಮಾಡುವ ವ್ಯಕ್ತಿ, ಸಮಾಜ ಸೇವಕಿ ಎದುರು ಸೋಲನುಭವಿಸಿದ ಘಟಾನುಘಟಿಗಳು

Public TV
2 Min Read
LabhSinghUgoke 1

ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ ಜಯಬೇರಿ ಬಾರಿಸಿದೆ. ಪಂಜಾಬ್ ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್ ಮುಖಂಡ ಚರಣ್ ಜಿತ್ ಸಿಂಗ್ ಚೆನ್ನಿ (Charanjit Singh Channi), ಮೊಬೈಲ್ ರಿಪೇರಿ ಮಾಡುವ ಅಂಗಡಿಯ ವ್ಯಕ್ತಿಯ ವಿರುದ್ಧವಾಗಿ ಹೀನಾಯವಾಗಿ ಸೋತಿದ್ದಾರೆ.

Navjot Singh Sidhu

ಮೊಬೈಲ್ ರಿಪೇರಿ ಮಾಡುವ ಲಾಭ್ ಸಿಂಗ್ ಉಗೋಕೆ ಅವರು ಚನ್ನಿಯನ್ನು 40,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಲಾಭ್ ಸಿಂಗ್ ತಾಯಿ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ಈತನ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ.  ಇದನ್ನೂ ಓದಿ:  ಬುಲ್ಡೋಜರ್ ಮುಂದೆ ಯಾರು ಬರಲು ಸಾಧ್ಯವಿಲ್ಲ: ಹೇಮಾ ಮಾಲಿನಿ

ಪಂಜಾಬ್‍ನಲ್ಲಿ ಅದ್ಭುತ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿವೆ. ಪೊರಕೆ ಗುರುತಿನ ಪಕ್ಷ ಆಮ್ ಆದ್ಮಿಗಳ ಅಖಂಡ ಆಪ್ ಕಿ ಸರ್ಕಾರ್ ಬಂದಿದೆ. ಕೇಜ್ರಿವಾಲ್ ಅವರ ಏಕ್ ಮೌಕಾ ನಿನಾದ ಫಲಿಸಿದೆ. ಆಮ್ ಆದ್ಮಿ ಕನ್ವಿನರ್ ಕೇಜ್ರಿವಾಲ್ ಪ್ರಕಟಿಸಿದ ಮ್ಯಾನಿಫೆಸ್ಟೋ ಮತ್ತು ಭರವಸೆಗಳಿಗೆ ಪಂಜಾಬಿಗಳು ಫಿದಾ ಆಗಿದ್ದಾರೆ. ಮುಖ್ಯವಾಗಿ ಏಕ್ ಮೌಕಾ ಕೇಜ್ರಿವಾಲ್, ಏಕ್ ಮೌಕಾ ಭಗವಂತ್ ಮನ್ ಘೋಷಣೆಗಳು ಜನ ಮನಗೆದ್ದಿದೆ. ಇದನ್ನೂ ಓದಿ: ಯುಪಿಯಲ್ಲಿ ‘ಬುಲ್ಡೋಜರ್ ಬಾಬಾ’ ಅಬ್ಬರ – ಮೋದಿ, ಯೋಗಿ ಆರ್ಭಟಕ್ಕೆ ಧೂಳೀಪಟ

Navjot singh sidhu

ಆಮ್ ಆದ್ಮಿ ಪಂಜಾಬ್‍ನಲ್ಲಿ ಲ್ಯಾಂಡ್‍ಸ್ಲೈಡ್ ವಿಕ್ಟರಿ ಸಾಧಿಸಿದ್ದಾರೆ. ಮೊದಲೇ ನಾಯಕತ್ವ ಕಚ್ಚಾಟದಲ್ಲಿ ಮುಳುಗಿದ್ದ ಕಾಂಗ್ರೆಸ್ ಪಕ್ಷವನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಶತಮಾನದ ಪಕ್ಷ ಧೂಳೀಪಟವಾಗಿದೆ. ಪಂಜಾಬ್‍ನಲ್ಲಿನ ಎಎಪಿ ವೇವ್ 2015ರ ದೆಹಲಿ ಫಲಿತಾಂಶವನ್ನು ನೆನಪಿಸಿದೆ. ಸಿಎಂ ಚನ್ನಿ, ಸಿಧು, ಅಮರಿಂದರ್ ಸಿಂಗ್, ಪ್ರಕಾಶ್ ಸಿಂಗ್ ಬಾದಲ್ ಸೇರಿ ಘಟಾನುಘಟಿಗಳೆಲ್ಲಾ ಮನೆ ಸೇರಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಸಿಎಂ ಚನ್ನಿಯನ್ನು ಸೋಲಿಸಿದ್ದು ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಓರ್ವ ಕಾಮನ್ ಮ್ಯಾನ್. ಇದನ್ನೂ ಓದಿ: ಬಿಜೆಪಿಗೆ ಗೆಲುವು – 4 ದಾಖಲೆ ಬರೆದ ಸಿಎಂ ಯೋಗಿ

LabhSinghUgoke

ಸಿಧುರನ್ನು (Navjot Singh Sidhu) ಸೋಲಿಸಿದ್ದು ಸಮಾಜ ಸೇವಕಿ ಜೀವನ್‍ ಜ್ಯೋತ್ ಕೌರ್. ಫೋನ್ ಕಾಲ್ ಸ್ಪಂದನೆ ಮೂಲಕ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಭಗವಂತ್ ಮನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ರಾಜಭವನದಲ್ಲಿ ಅಲ್ಲ. ತಮ್ಮ ಪೂರ್ವಿಕರ ಗ್ರಾಮ ಕಟ್ಕರ್ ಕಲನ್‍ನಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಭಗತ್ ಸಿಂಗ್ ಹುಟ್ಟೂರು ಕೂಡ ಹೌದು. ಅಂದ ಹಾಗೇ, ಭಗವಂತ್ ಮನ್ ಒಂದು ಕಾಲದಲ್ಲಿ ಹಾಸ್ಯ ನಟ. ಇನ್ನು ಸಿಎಂ ಚನ್ನಿ ನಾಳೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *