ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಮದುವೆಯಾಗುವುದಾಗಿ ನಂಬಿಸಿ ನರ್ಸ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 59 ವಯಸ್ಸಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಭದೋಹಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ಚಿಂತಾಮಣಿ ಶರ್ಮಾ ಎಂಬ ವ್ಯಕ್ತಿ 39 ವಯಸ್ಸಿನ ನರ್ಸ್ ಮೇಲೆ 21 ವರ್ಷಗಳ ಅವಧಿಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಏರ್‌ಲಿಫ್ಟ್ ವೇಳೆ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ
ಆರೋಪಿ ವಿರುದ್ಧ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಸಬಿಹಾ ಖಾತೂನ್ ನ್ಯಾಯಾಲಯದಲ್ಲಿ ಸಂತ್ರಸ್ತೆ ನರ್ಸ್ ಪ್ರಕರಣದ ವಿಚಾರಣೆ ನಡೆಸಿತ್ತು. ಅರ್ಜಿಯನ್ನು ಆಲಿಸಿದ ಸಿಜೆಎಂ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಗುರುವಾರ ಪೊಲೀಸರಿಗೆ ಆದೇಶಿಸಿದ್ದರು.
ಸಂತ್ರಸ್ತೆ 15 ವರ್ಷ ವಯಸ್ಸಿನವಳಿದ್ದಾಗ ಅವಳನ್ನು ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಶರ್ಮಾ ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯ ಅಧ್ಯಯನಕ್ಕೆ ಸಹಾಯ ಮಾಡುವುದಾಗಿ ಕುಟುಂಬದವರಿಗೂ ಹತ್ತಿರವಾಗಿದ್ದ ಎಂದು ಭಾದೋಹಿ ಎಸ್‌ಪಿ ಮೀನಾಕ್ಷಿ ಕಾತ್ಯಾಯನ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಪತ್ನಿಯ ಖಾಸಗಿ ಕ್ಷಣ ವೀಡಿಯೋ ಮಾಡಿ ಹಂಚಿಕೊಂಡ ಪತಿ!
ಬೆದರಿಕೆ ಹಾಕುವ ಮೂಲಕ ಆಕೆಯ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದಾನೆ. ಸಮಯ ಕಳೆದಂತೆ, ಆಕೆಯೊಂದಿಗೆ ದೈಹಿಕ ಸಂಬಂಧವನ್ನು ಮುಂದುವರೆಸಿದ್ದಾನೆ. ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡುವ ಮೂಲಕ ನಿರಂತರವಾಗಿ ಲೈಂಗಿಕವಾಗಿ ಶೋಷಣೆ ಮಾಡಿದ ಶರ್ಮಾ, ರಹಸ್ಯವಾಗಿ ಬೇರೊಬ್ಬಳೊಂದಿಗೆ ಮದುವೆಯಾಗಿದ್ದ. ಆದರೆ ಈಕೆಯನ್ನು ವಂಚಿಸುತ್ತಲೇ ಇದ್ದ. ಅವಳೊಂದಿಗೆ ಲೈಂಗಿಕ ಸಂಬಂಧವನ್ನು ಮುಂದುವರೆಸಿದ್ದ ಎಂದು ಎಸ್‌ಪಿ ಹೇಳಿದ್ದಾರೆ.
ಆರೋಪಿಯನ್ನು ವಾರಣಾಸಿಯ ಅಪಾರ್ಟ್‌ಮೆಂಟ್‌ನಿಂದ ಶುಕ್ರವಾರ ಬಂಧಿಸಲಾಗಿದೆ. ನರ್ಸ್‌ಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ಲಿಖಿತ ಹೇಳಿಕೆಯನ್ನು ಶೀಘ್ರದಲ್ಲೇ ನ್ಯಾಯಾಲಯದಲ್ಲಿ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.