Oscar 2025: ಆಸ್ಕರ್‌ ಅಂಗಳಕ್ಕೆ ಧುಮುಕಿದ ಆಮೀರ್‌ ಖಾನ್‌ ನಿರ್ಮಾಣದ ‘ಲಾಪತಾ ಲೇಡಿಸ್’ ಚಿತ್ರ

Public TV
1 Min Read
laapataa ladies

ಸ್ಕರ್ ಅವಾರ್ಡ್‌ ಕಾರ್ಯಕ್ರಮದ ಬಗ್ಗೆ ಬಿಗ್‌ ಅಪ್‌ಡೇಟ್‌ವೊಂದು ಸಿಕ್ಕಿದೆ. ಕಿರಣ್ ರಾವ್ ಚೊಚ್ಚಲ ನಿರ್ದೇಶನದ ಬಾಲಿವುಡ್ ಸಿನಿಮಾ ‘ಲಾಪತಾ ಲೇಡಿಸ್’ (Laapataa Ladies) ಚಿತ್ರ 2025ರ ಆಸ್ಕರ್‌ಗೆ (Oscar 2025) ನಾಮ ನಿರ್ದೇಶನಗೊಂಡಿದೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್- ಮತ್ತೆ ಬಾತ್‌ರೂಮ್ ರೀಲ್ಸ್ ಶೇರ್ ಮಾಡಿದ ನಿವೇದಿತಾ ಗೌಡ

FotoJet 37

ಆಮೀರ್‌ ಖಾನ್‌ ನಿರ್ಮಾಣದ ಮತ್ತು ಕಿರಣ್‌ ರಾವ್‌ ನಿರ್ದೇಶನದ ‘ಲಾಪತಾ ಲೇಡಿಸ್‌’ ಚಿತ್ರವು ಭಾರತವನ್ನು ಪ್ರತಿನಿಧಿಸಿ ಆಸ್ಕರ್‌ ಅಂಗಳಕ್ಕೆ ಲಗ್ಗೆ ಇಟ್ಟಿದೆ. ಇದರ ಜೊತೆಗೆ 29 ಸಿನಿಮಾಗಳು 2025ರ ಆಸ್ಕರ್‌ ರೇಸ್‌ನಲ್ಲಿವೆ. ಹನುಮಾನ್‌, ಕಲ್ಕಿ 2898 ಎಡಿ, ಅನಿಮಲ್ ಸಿನಿಮಾ, ಗುಡ್‌ ಲಕ್‌, ಆರ್ಟಿಕಲ್‌ 370, ಆಟ್ಟಂ, ಆಡುಜೀವಿತಂ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿವೆ.

ಕಳೆದ ವರ್ಷ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್‌ ಪ್ರಶಸ್ತಿ ಲಭಿಸಿತ್ತು.

Share This Article