– ಒಟ್ಟು 72,740 ಜನರಿಂದ ವೀಕ್ಷಣೆ
ಬೆಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ (laal Bagh) ನಡೆಯುತ್ತಿರುವ ಪ್ಲವರ್ ಶೋಗೆ (Flower Show) ಭರ್ಜರಿ ರೆಸ್ಪಾನ್ಸ್ ಬಂದಿದೆ.
ಜ.14ರಿಂದ ಆರಂಭವಾಗಿರುವ ಪ್ಲವರ್ ಶೋ ಜ.26ರವರೆಗೆ ನಡೆಯಲಿದೆ. ಆರಂಭವಾದ ಎರಡೇ ದಿನದಲ್ಲಿ 72,740 ಜನರು ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದು, ಒಟ್ಟು 28,348,90 ರೂ. ಆದಾಯ ಹರಿದುಬಂದಿದೆ. ಇದನ್ನೂ ಓದಿ: ತುಮಕೂರಿನಲ್ಲಿ ಹಾಕಿ ಸ್ಟೇಡಿಯಂ, ಈಜುಕೊಳ ನಿರ್ಮಾಣಕ್ಕೆ ಅನುದಾನ: ಸಿಎಂ
ಜ.15ರಂದು ಒಂದೇ ದಿನ 32,950 ಜನರಿಂದ ಪ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ. ಇದರಲ್ಲಿ 24,950 ವಯಸ್ಕರು ಹಾಗೂ 3,750 ಮಕ್ಕಳು ಭೇಟಿ ನೀಡಿದ್ದಾರೆ. ಈ ಪೈಕಿ ಒಟ್ಟು 21,56,330 ಹಣ ಸಂಗ್ರಹವಾಗಿದೆ. ಶುಕ್ರವಾರ (ಜ.15) ಕೂಡ ಉತ್ತಮ ರೆಸ್ಪಾನ್ಸ್ ಬಂದಿದ್ದು, 39,790 ಮಂದಿ ಫ್ಲವರ್ ಶೋಗೆ ಭೇಟಿ ನೀಡಿದ್ದಾರೆ. ಇದರಲ್ಲಿ 15,590 ವಯಸ್ಕರು, 4,750 ಮಕ್ಕಳು ಭೇಟಿ ನೀಡಿದ್ದು, ಒಟ್ಟು 6,78,560 ರೂ. ಆದಾಯ ಹರಿದುಬಂದಿದೆ.



