ಬೆಂಗಳೂರು: ಲಾಲ್‌ಬಾಗ್‌ನಲ್ಲಿ (Laal Bagh) ನಡೆಯುತ್ತಿರುವ 218ನೇ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ (ಆ.18) ತೆರೆಬೀಳಲಿದೆ.ಇದನ್ನೂ ಓದಿ: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರ – ಆ.23 ಕ್ಕೆ ವಿಚಾರಣೆ ಮುಂದೂಡಿಕೆ
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಿನ್ನೆಲೆ ನಗರದ ಲಾಲ್‌ಬಾಗ್‌ನಲ್ಲಿ ಆ.07ರಿಂದ 18ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಇಂದು ಸಂಜೆ 7 ಗಂಟೆಗೆ ಫಲಪುಷ್ಪ ಪ್ರದರ್ಶನ ಮುಕ್ತಾಯಗೊಳ್ಳಲಿದೆ. ಪ್ರದರ್ಶನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಥೀಮ್‌ನಲ್ಲಿ ಕಿತ್ತೂರು ಸಂಸ್ಥಾನ, ರಾಜರು, ಇತಿಹಾಸ, ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಐತಿಹಾಸಿಕ ಹೆಜ್ಜೆಗುರುತುಗಳ ಪ್ರತಿಬಿಂಬವನ್ನು ಪುಷ್ಪಗಳಲ್ಲಿ ತೋರ್ಪಡಿಸಲಾಗಿತ್ತು.
ಭಾನುವಾರ ಒಂದೇ ದಿನ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ 7,960 ಮಕ್ಕಳು, 7,200 ಶಾಲಾ ಮಕ್ಕಳು, 52,150 ವಯಸ್ಕರು ಸೇರಿದಂತೆ ಒಟ್ಟು 67,310 ಮಂದಿ ಭೇಟಿ ನೀಡಿದ್ದು, ಒಟ್ಟು 37.39 ಲಕ್ಷ ರೂ. ಆದಾಯ ಬಂದಿದೆ. ಈವರೆಗೆ ಒಟ್ಟು 5.80 ಲಕ್ಷ ಜನರು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದಾರೆ. ಸೋಮವಾರ ಕೊನೆಯ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ದಿನದ ಅಂತ್ಯಕ್ಕೆ ಭೇಟಿ ಕೊಟ್ಟವರ ಒಟ್ಟು ಜನರ ಸಂಖ್ಯೆ 6 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: `ವೇಷಗಳು’ ಚಿತ್ರದ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಿದ ಶರತ್ ಲೋಹಿತಾಶ್ವ