ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

Public TV
1 Min Read
Laal Singh Chaddha KGF Chapter 2 Clash Aamir Khan Yash

ಮುಂಬೈ: ಕೆಜಿಎಫ್ ಚಾಪ್ಟರ್-2 ರಿಲೀಸ್ ದಿನವೇ `ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನೂ ರಿಲೀಸ್ ಮಾಡುತ್ತಿರುವುದಕ್ಕೆ ಅಮೀರ್ ಖಾನ್ ಕೆಜಿಎಫ್‍ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್‍ಗೆ ಟೆಕ್ಟ್ಸ್ ಮೆಸೇಜ್ ಮಾಡಿ ಕ್ಷಮೆ ಕೇಳಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಮೀರ್, ನಾನು ಬೇರೆಯವರನ್ನು ಅತಿಕ್ರಮಿಸಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಸೃಷ್ಟಿ ಆಗುವುದನ್ನು ದ್ವೇಷಿಸ್ತೇನೆ. ಆದರೆ ನಾನು ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಏಪ್ರಿಲ್ 14ರಂದು ಬೈಸಾಖಿ ದಿನ ಸಿನಿಮಾ ರಿಲೀಸ್ ಮಾಡುವುದು ಸೂಕ್ತ ಎಂದು ಭಾವಿಸಿದ್ದೆ. ಹೀಗಾಗಿ ನಾನು ಕೆಜಿಎಫ್ ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ದೇಶಕ ಪ್ರಶಾಂತ್‌ ನೀಲ್ ಮತ್ತು ಯಶ್ ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್!

prashanth neel

ಬೈಸಾಖಿ ದಿನ ನನ್ನ ಸಿನಿಮಾ ಬಿಡುಗಡೆಯಾದರೆ ಸೂಕ್ತ ಎಂದು ಅವರಿಗೆ ತಿಳಿಸಿದೆ. ಅವರು ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡರು. ಅವರ ಸಿನಿಮಾ ರಿಲೀಸ್ ಇದ್ದರೂ ಅದೇ ನೀವು ಸಿನಿಮಾ ಬಿಡುಗಡೆ ಮಾಡಿ ಎಂದು ನನಗೆ ಹೇಳಿದರು. ಅವರ ಸ್ಪಂದನೆ ನನಗೆ ಇಷ್ಟ ಆಯಿತು. ನನ್ನ ಯೋಚನೆಗೆ ಯಶ್ ತುಂಬಾನೇ ಬೆಂಬಲವಾಗಿ ನಿಂತರು ಎಂದು ಅಮೀರ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

ಸಾಮಾನ್ಯವಾಗಿ ಅಮೀರ್ ಖಾನ್ ಸಿನಿಮಾಗಳು ಕ್ರಿಸ್‍ಮಸ್ ರಜೆಗೆ ರಿಲೀಸ್ ಆಗುತ್ತಿತ್ತು. ಆದರೆ ಕ್ರಿಸ್‍ಮಸ್ ಬದಲು ಏಪ್ರಿಲ್‍ನಲ್ಲಿ ಕೆಜಿಎಫ್ ಜೊತೆಗೆ ರಿಲೀಸ್ ಆಗುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೋವಿಡ್ ಕಾರಣದಿಂದ ಕ್ರಿಸ್‍ಮಸ್‍ಗೆ ರಿಲೀಸ್ ಮಾಡುವುದು ಬೇಡ ಎಂದು ಲಾಲ್ ಸಿಂಗ್ ಚಡ್ಡಾ ಸಿನಿಮಾ ತಂಡ ನಿರ್ಧರಿಸಿತ್ತು. ಈ ನಡುವೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾರ್ಚ್ 14ಕ್ಕೆ ಮೊದಲು ಮುಗಿಯುವುದು ಕಷ್ಟವಾಗಿತ್ತು. ಹೀಗಾಗಿ ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಮಾಡೋಣ ಎಂದು ಲಾಲ್‍ಸಿಂಗ್ ಚಡ್ಡಾ ಸಿನಿಮಾ ತಂಡ ನಿರ್ಧರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *