ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಐದು ಕುಟುಂಬಗಳಿಗೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 25 ಲಕ್ಷ ರೂ. ನೆರವು ನೀಡಿದೆ.
ಪಂಜಾಬ್ ಹಾಗೂ ಹಿಮಾಚಲ ಪ್ರದೇಶದ ಯೋಧರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗಿದೆ. ನೆರವಿನ ಹಣವನ್ನು ತಂಡ ಕುಟುಂಬ ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ. ಈ ವೇಳೆ ತಂಡ ನಾಯಕ ಆರ್. ಅಶ್ವಿನ್ ಹಾಗೂ ಸಿಆರ್ ಪಿಎಫ್ ಡಿಐಜಿ ವಿಕೆ ಕುನ್ದಲ್ ಅವರು ಹಾಜರಿದ್ದರು.
Advertisement
Advertisement
ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ತಂಡ ಈ ಬಾರಿಯ ಕಪ್ ಗೆಲ್ಲುವ ರೇಸ್‍ನಲ್ಲಿದ್ದು, ಮೊದಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. 2014 ರಲ್ಲಿ ಪಂಜಾಬ್ ತಂಡ ಆಡಿದ 11 ಪಂದ್ಯಗಳನ್ನು ಗೆದ್ದು, 3 ಪಂದ್ಯಗಳಲ್ಲಿ ಮಾತ್ರ ಸೋಲುಂಡಿತ್ತು. ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿರುವ ಪಂಜಾಬ್ ತಂಡ ಗೆಲುವಿನ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ.
Advertisement
ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರಂಭದ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು ವಿಶ್ವಾಸ ಮೂಡಿಸಿತ್ತು. ಆದರೆ ಆ ಬಳಿಕ ನಡೆದ 5 ಪಂದ್ಯಗಳಲ್ಲಿ ಸೋಲುಂಡು ನಿರಾಸೆ ಮೂಡಿಸಿತ್ತು. ಇತ್ತ 23 ರಂದು 12ನೇ ಆವೃತ್ತಿಯ ಟೂರ್ನಿ ಮಾರ್ಚ್ 23 ರಂದು ಆರಂಭವಾಗುತ್ತಿದ್ದು, ಪಂಜಾಬ್ ತಂಡ ಮಾರ್ಚ್ 25 ರಂದು ರಾಜಸ್ಥಾನ ತಂಡವನ್ನು ಎದುರಿಸಲಿದೆ.
Advertisement
Mauj, masti and a little bit of bhangra ????
The FUN-JABI element was at its very best during the photoshoot. ????????
P.S: Watch it till the end. ????#SaddaPunjab pic.twitter.com/RQ4VdvlqSA
— Punjab Kings (@PunjabKingsIPL) March 21, 2019