ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 11ನೇ ಆವೃತ್ತಿಯ ಹರಾಜು ಬೆಂಗಳೂರಿನಲ್ಲಿ ಶುರುವಾಗಿದೆ. ಕರ್ನಾಟಕ ಇಬ್ಬರು ಆಟಗಾರರು ಐಪಿಎಲ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದಾರೆ.
ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಕರುಣ್ ನಾಯರ್ ಮೂಲ ಬೆಲೆ 50 ಲಕ್ಷ ಇದ್ದರೂ ಅವರನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡ 5.60 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.
ಇನ್ನೋರ್ವ ಆಟಗಾರ ಕೆ.ಎಲ್ ರಾಹುಲ್ 11 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ. ರಾಹುಲ್ ಕಳೆದ ಸೀಸನ್‍ನಲ್ಲಿ ಆರ್‍ಸಿಬಿ ಪರ ಆಡಿದ್ದರು. ಈ ಬಾರಿ ರಾಹುಲ್ ಖರೀದಿಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪಂಜಾಬ್ ಹಾಗೂ ಹೈದರಾಬಾದ್ ತಂಡಗಳು ರಾಹುಲ್‍ರನ್ನು ಖರೀದಿಸಲು ತೀವ್ರ ಪೈಪೋಟಿ ನಡೆಸಿದ್ದರು. ಕೊನೆಗೆ ರಾಹುಲ್ ಪಂಜಾಬ್ ತಂಡದ ಪಾಲಾದರು.
ಶಿಖರ್ ಧವನ್ ಹರಾಜಿನಲ್ಲಿ ಸೇಲ್ ಆದ ಮೊದಲ ಆಟಗಾರ ಎನಿಸಿಕೊಂಡರು. ಶಿಖರ್ ಧವನ್‍ಗೆ 2 ಕೋಟಿ ರೂ. ಮೂಲ ಬೆಲೆ ಫಿಕ್ಸ್ ಮಾಡಲಾಗಿತ್ತು. ಆದರೆ ಧವನ್ 5.20 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾದರು.
ಇಂದಿನ ಹರಾಜಿನಲ್ಲಿ 36 ಆಟಗಾರರ ಬೇಸ್ ಪ್ರೈಸ್ 2 ಕೋಟಿ ರೂ. ಎಂದು ನಿಗದಿಗೊಳಿಸಲಾಗಿತ್ತು. ಭಾನುವಾರದವರೆಗೆ ನಡಯಲಿರುವ ಹರಾಜಿನಲ್ಲಿ ಒಟ್ಟು 8 ತಂಡಗಳಿಗಾಗಿ 182 ಆಟಗಾರರ ಹರಾಜು ನಡೆಯಲಿದೆ.
https://twitter.com/IPLCricket/status/957150488742514690
https://twitter.com/IPLCricket/status/957155147653746689