ಕೊಪ್ಪಳ: ಕುಷ್ಟಗಿ ಪಟ್ಟಣದಲ್ಲಿರುವ ಮಿನಿ ವಿಧಾನಸೌಧ ಕಚೇರಿಗೆ ಆಗಮಿಸುವ ಸಾರ್ವಜನಿಕರು ಶೌಚಾಲಯವಿಲ್ಲದೆ ಪರಿತಪಿಸುವಂತಾಗಿದೆ.
ನಿತ್ಯ ಸಾವಿರಾರು ಜನ ಸಂಪರ್ಕಕ್ಕಿರುವ ಮಿನಿ ವಿಧಾನಸೌಧದಲ್ಲಿ ಕನಿಷ್ಠ ಒಂದು ಶೌಚಾಲಯವಿಲ್ಲ. ಸಾರ್ವಜನಿಕ ಶೌಚಾಲಯ ಇಲ್ಲದಿರೋದರಿಂದ ಮಿನಿ ವಿಧಾನಸೌಧದ ಹೊರಾಂಗಣವೇ ಮೂತ್ರ ಹಾಗೂ ಶೌಚಾಲಯವಾಗಿ ಮಾರ್ಪಟ್ಟಿದೆ.
Advertisement
ಈ ಬೃಹತ್ ಕಟ್ಟಡ 10 ರಿಂದ 12 ಸರ್ಕಾರಿ ಇಲಾಖೆ ಕಚೇರಿಗಳನ್ನು ಹೊಂದಿದ್ದರೂ ಕನಿಷ್ಠ ಒಂದು ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪೇಚಾಡುವಂತಾಗಿದೆ. ಕಚೇರಿಗಳಿಗೆ ಆಗಮಿಸುವ ಮಹಿಳಾ ಅಧಿಕಾರಿಗಳು ಮೂತ್ರ ಹಾಗೂ ಶೌಚಾಲಯಕ್ಕೆ ಒಂದು ಕಿ.ಮೀ ದೂರದ ಪ್ರವಾಸಿ ಮಂದಿರ ಎಡತಾಕುವುದು ಅನಿವಾರ್ಯವಾಗಿದೆ. ತಾಲೂಕಾ ದಂಡಾಧಿಕಾರಿಗಳು ಸೇರಿದಂತೆ ಇನ್ನೂಳಿದ ಪ್ರಮುಖ ತಾಲೂಕಾ ಕೇಂದ್ರಗಳನ್ನು ಹೊಂದಿದ ಮಿನಿ ವಿಧಾನಸೌಧಕ್ಕೆ ಸಂಬಂಧಿಸಿದವರು ಕೂಡಲೇ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕೆಂಬ ಅಳಲು ಇಲ್ಲಿಗೆ ಬೇಟಿಕೊಡುವ ಸಾರ್ವಜನಿಕರು ಸೇರಿದಂತೆ ನೌಕರರ ಒತ್ತಾಯವಾಗಿದೆ.