ಕೊಪ್ಪಳ: ಕುಷ್ಟಗಿಯಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಪೊಲೀಸರ ವಿರುದ್ಧ ಕಲ್ಲು ತೂರಾಟ ನಡೆಸಿ ಉದ್ಧಟತನ ತೋರಿದ ಘಟನೆ ನಡೆದಿದೆ.
ಬೆಂಗಳೂರು ಮೂಲದ ಕಾಂಗ್ರೆಸ್ ಮುಖಂಡ ದಿಲೀಪ್ ಕುಮಾರ್ ಎಂಬವರು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದರು. ಆದರೆ ಇದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ದೀಲಿಪ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಸುಖಾಸುಮ್ಮನೇ ಆಕ್ರೋಶಗೊಂಡ ದಿಲೀಪ್ ಬೆಂಬಲಿಗರು ಸಮಾವೇಶದ ಹೊರಗಡೆ ಗೊಂದಲ ಮೂಡಿಸಿಲು ಪ್ರಯತ್ನಿಸಿ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸಮಾವೇಶಕ್ಕೆ ಹಾಕಲಾಗಿದ್ದ ಕುರ್ಚಿಗಳನ್ನು ಪೊಲೀಸರ ವಿರುದ್ಧ ಎಸೆದಿದ್ದಾರೆ.
ಕಾರ್ಯಕ್ರಮದ ವೇದಿಕೆ ಎಡಭಾಗದಲ್ಲಿ ಘಟನೆ ನಡೆದಿದ್ದು ಮುಖಂಡ ದಿಲೀಪ್ ಪ್ರತಿಕ್ರಿಯಿಸಿ, ನನ್ನನ್ನು ಇಲ್ಲಿ ತುಳಿಯುವ ಕಾರ್ಯ ಮಾಡಲಾಗುತ್ತದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಪೊಲೀಸರು ಕಾರ್ಯಕರ್ತರನ್ನು ಹರಸಾಹಸ ಪಟ್ಟು ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಸಿಎಂ ಯಡವಟ್ಟು – ಬಾಯಿತಪ್ಪಿ ರಾಹುಲ್ ಗಾಂಧಿ ಹತ್ಯೆ ಅಂದ್ರು
https://www.youtube.com/watch?v=QOhBFb5ibNU