ಬೆಂಗಳೂರು: ಸ್ಯಾಂಡಲ್ವುಡ್ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಚಾರವಾಗಿ ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಒಂಟಿಯಾಗಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ.
Advertisement
ಟ್ವೀಟ್ನಲ್ಲಿ ಏನಿದೆ?: ಕೋವಿಡ್ ಎರಡು ಅಲೆಯನ್ನು ತಪ್ಪಿಸಿಕೊಂಡೆ. ಆದರೆ ಈಗ ಕೋವಿಡ್ ಪಾಸಿಟಿವ್ ಆಗಿದೆ. ನಿನ್ನೆ ಸಂಜೆಯವರೆಗೂ ನನಗೆ ಕೋವಿಡ್ ನೆಗೆಟಿವ್ ಆಗಿತ್ತು. ನಾನು ಐಸೋಲೇಷನ್ನಲ್ಲಿದ್ದೇನೆ. ಒಂಟಿಯಾಗಿರುವುದನ್ನು ನಿಜಕ್ಕೂ ದ್ವೇಷಿಸುತ್ತೇನೆ. ಮುಂದಿನ ಐದು ದಿನಗಳಕಾಲ ನನಗೆ ಮನರಂಜನೆ ನೀಡಿ. ಕೊರೊನಾ ಲಕ್ಷಣ ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ
Advertisement
Ok. finally #Covid catches up with me after dodging last 2 waves. I have just tested positive. Till last eve i was negative. Have a running nose,did a test n Voila! I have isolated myself. Hate being alone. So keep me entertained for the next 5 days. N get tested if any signs ????
— KhushbuSundar (@khushsundar) January 10, 2022
Advertisement
ಖುಷ್ಬೂ ಸುಂದರ್ ಅವರು 10 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿರುವ ವಿಚಾರವನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದರು. ಹೊಸ ಲುಕ್ ಮೂಲಕವಾಗಿ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಖುಷ್ಬೂ ಅವರಿಗೆ ಅಭಿಮಾನಿ ಮದುವೆಯೆ ಪ್ರಪೋಸಲ್ಅನ್ನು ಸೋಶಿಯಲ್ ಮೀಡಿಯಾದಲ್ಲಿ ಇಟ್ಟಿದ್ದರು. ಈ ವಿಚಾರ ಕೆಲವು ದಿನಗಳ ಹಿಂದೆ ಸೊಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿತ್ತು.