ನಟನೆ ಮತ್ತು ರಾಜಕೀಯ ಎರಡು ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿ ಖುಷ್ಬೂ ಸುಂದರ್ ಇದೀಗ ನಟ ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷ್ಬೂ ಖುಷಿಪಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಜೋಡಿಯಾಗಿ ನಟಿಸಿರುವ ಕಮಲ್ ಹಾಸನ್ ಮತ್ತು ಖುಷ್ಬೂ ಇದೀಗ ಮತ್ತೆ ಭೇಟಿಯಾಗಿದ್ದಾರೆ. ನನ್ನ ಹೀರೋ ಎಂದು ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ನಟಿ ಖುಷ್ಬೂ ಸಂಭ್ರಮಿಸಿದ್ದಾರೆ. ನನ್ನ ಹೀರೋ, ನನ್ನ ಗೆಳೆಯ, ನನ್ನ ವಿಕ್ರಮ್ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
My Hero.. My friend. My Vikram ❤️❤️❤️@ikamalhaasan pic.twitter.com/apYEjgjkM2
— KhushbuSundar (@khushsundar) June 18, 2022
ಕಮಲ್ ಹಾಸಸ್ ನಟನೆಯ ಜೊತೆಗೆ ನಿರ್ಮಾಣ ಮಾಡಿದ `ವಿಕ್ರಮ್’ ಸಿನಿಮಾ ಮೂಲಕ ಕಂಬ್ಯಾಕ್ ಆಗಿದ್ದಾರೆ. `ವಿಕ್ರಮ್’ ಚಿತ್ರದ ಸಕ್ಸಸ್ ಅಲೆಯಲ್ಲಿ ತೆಲುತ್ತಿದ್ದಾರೆ. ಇದೇ ಖುಷಿಯಲ್ಲಿ ಚಿತ್ರರಂಗದ ಸ್ನೇಹಿತರನ್ನು ಕಮಲ್ ಭೇಟಿಯಾಗಿ ಸಕ್ಸಸ್ ಖುಷಿಯಾಗಿ ಸಂಭ್ರಮಿಸುತ್ತಿದ್ದಾರೆ. ಇದೀಗ ವಿಕ್ರಮ್ ಸಿನಿಮಾ ಗೆದ್ದ ಖುಷಿಯಲ್ಲಿ ಕಮಲ್ ಹಾಸನ್, ಖುಷ್ಬೂ ಪರಸ್ಪರ ಭೇಟಿಯಾಗಿದ್ದಾರೆ. ೩೦ ವರ್ಷಗಳಿಂದ ಇಬ್ಬರಿಗೂ ಗೆಳೆತನವಿದ್ದು, ಇಂದಿಗೂ ಪರಸ್ಪರ ಭೇಟಿಯಾಗುತ್ತಾ ಒಬ್ಬರ ಗೆಲುವನ್ನ ಇನ್ನೊಬ್ಬರು ಸಂಭ್ರಮಿಸುತ್ತಾರೆ.
Live Tv