ಚೆನ್ನೈ: ತಮಿಳುನಾಡು (Tamil Nadu) ಬಿಜೆಪಿ (BJP)) ಉಪಾಧ್ಯಕ್ಷೆಯಾಗಿ ಖುಷ್ಬೂ ಸುಂದರ್ (Kushboo Sundar) ನೇಮಕಗೊಂಡಿದ್ದಾರೆ.
ಮಾಜಿ ಸಂಸದರಾದ ವಿ.ಪಿ ದೊರೈಸಾಮಿ, ಕೆ.ಪಿ.ರಾಮಲಿಂಗಂ, ಶಶಿಕಲಾ ಪುಷ್ಪಾ ಮತ್ತು ಎಂ. ಚಕ್ರವರ್ತಿ ಸೇರಿದಂತೆ ಇತರರು ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಅವರ ನೇಮಕಾತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅನುಮೋದಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ತಿಳಿಸಿದ್ದಾರೆ. ಇದನ್ನೂ ಓದಿ: 6520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಪ್ರಹ್ಲಾದ್ ಜೋಶಿ
ಕೇಶವ ವಿನಾಯಕನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ), ಪ್ರೊ.ರಾಮ ಶ್ರೀನಿವಾಸನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕರಾಟೆ ಆರ್.ತ್ಯಾಗರಾಜನ್ ರಾಜ್ಯ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.
ಬಿಜೆಪಿ ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಬಗ್ಗೆ ಖುಷ್ಬೂ ಸುಂದರ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಪ್ರಧಾನಿ ಮೋದಿ ಹಾಗೂ ಜೆ.ಪಿ ನಡ್ಡಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ಮತಗಳ್ಳತನ ಆರೋಪ: ಆ.5 ರಂದು ಅರ್ಧ ಕಿ.ಮೀ ರಾಹುಲ್ ಪಾದಯಾತ್ರೆ, ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ