ಮಡಿಕೇರಿ: ಜಾಗದ ದಾಖಲಾತಿಗಳನ್ನು ಸರಿಪಡಿಸುವ ಸಾಲುವಾಗಿ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ತಾಲೂಕು ಕಚೇರಿ ಬಳಿ ನಡೆದಿದೆ.
ತಾಲೂಕು ಕಚೇರಿಯ ಅಧಿಕಾರಿ ವಿನೋದ್ ಲಂಚ ಪಡೆದಾತ. ಕುಶಾಲನಗರ ತಾಲೂಕಿನ ಶುಂಠಿಕೊಪ್ಪ ಹೋಬಳಿಯ ಅಂದಗೋವೆ ನಿವಾಸಿ ಬೆಳ್ಳಿಯಪ್ಪ ಆಸ್ತಿ ದಾಖಲಾತಿಗಳನ್ನು ಸರಿಪಡಿಸಲು ತಾಲೂಕು ಕಚೇರಿಗೆ ಬಂದಿದ್ದರು. ಈ ವೇಳೆ ಶಿರಸ್ತೆದಾರ ವಿನೋದ್ ಅವರು 14.5 ಲಕ್ಷ ಲಂಚ ನೀಡಲು ಬೇಡಿಕೆ ಇಟ್ಟಿದ್ದರು.
Advertisement
Advertisement
ಈ ಹಿನ್ನೆಲೆಯಲ್ಲಿ ಬೆಳ್ಳಿಯಪ್ಪ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಇಂದು ವಿನೋದ್ ತಾಲೂಕು ಕಚೇರಿ ಬಳಿ ಇರುವ ಟೀ ಕ್ಯಾಂಟೀನ್ ಬಳಿ ಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಲಂಚ ಸ್ವೀಕರಿಸಿದ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ, ವಿನೋದ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು
Advertisement
ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಿಚಾರಣೆಯಲ್ಲಿ ಎಸಿಬಿ ಇನ್ಸ್‍ಪೆಕ್ಟರ್ ಹರೀಶ್, ಕುಮಾರ್ ಸಿಬ್ಬಂದಿ ದಿನೇಶ್, ವಿಶ್ವನಾಥ್, ಸುರೇಶ್, ಲೋಹಿತ್, ದೀಪಿಕಾ, ವಿಜಯ್ ಕುಮಾರ್ ಭಾಗಿಯಾಗಿದ್ದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್