ಬಳ್ಳಾರಿ: ಬಿಜೆಪಿ ಅಭ್ಯರ್ಥಿಯಾದ ಜೆ ಶಾಂತಾ ಅವರು ನಾಮಪತ್ರ ಸಲ್ಲಿಕೆ ಮುನ್ನ ಕುರುಬ ಸಮಾಜದ ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ಶಶಿಕಲಾ ಅವರ ಕಾಲು ಮುಗಿದು ಆಶೀರ್ವಾದ ಕೋರಿದ್ದಾರೆ. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷೆ ಶಶಿಕಲಾ ಅವರು ಶಾಂತಾಗೆ ಆಶೀರ್ವಾದಿಸಿ ಬಾವುಕರಾಗಿ ಕಣ್ಣೀರು ಹಾಕಿದರು. ಚುನಾವಣೆ ನಿಮಿತ್ತ ಎಲ್ಲ ನಾಯಕರು ಬಂದು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಬಳ್ಳಾರಿ ಜನತೆ ನನ್ನನ್ನು ಮತ್ತೊಮ್ಮೆ ಗೆಲ್ಲಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಜೆ.ಶಾಂತಾ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜನರ ಆರ್ಶೀವಾದದಿಂದ ಇಷ್ಟು ಮಟ್ಟಿಗೆ ಬೆಳೆದಿದ್ದೇನೆ. ಅವರ ಮನೆ ಮಗಳು ನಾನು 2014 ರಲ್ಲಿ ಎಲ್ಲರೂ ಕೂಡ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿದ್ದರು. ಅಂತಹದಲ್ಲಿ ಮತ್ತೆ ನನ್ನನ್ನು ಬಳ್ಳಾರಿಯ ಜನರು ಮತ್ತೆ ಮನೆಮಗಳಾಗಿ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದೇನೆ. ಬಳ್ಳಾರಿಯಲ್ಲಿ ಅಭಿವೃದ್ಧಿ ಎಂಬುದು ಭಾರತೀಯ ಜನತಾ ಪಕ್ಷ ವಿದ್ದಾಗ ಮಾತ್ರ ಕಂಡಿರುವಂತದ್ದು ಹೊರೆತು ಇವರೇ ಸ್ವತಃ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಶ್ರೀರಾಮಲು ಶಾಸಕರಾಗಿ ಆಯ್ಕೆಯಾದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಬಳ್ಳಾರಿಯಲ್ಲಿ ಲೋಕಸಭೆ ಉಪ ಚುನಾವಣೆ ಘೋಷಣೆಯಾಗಿತ್ತು. ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದ ಬಗ್ಗೆ ಗೊಂದಲ ಸಹ ಏರ್ಪಟ್ಟಿತ್ತು. ಮೊದಲಿಗೆ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್’ಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ವಿ.ಎಸ್.ಉಗ್ರಪ್ಪರನ್ನು ಲೋಕಸಭಾ ಅಭ್ಯರ್ಥಿಯೆಂದು ಘೋಷಣೆಮಾಡಿ ಎಲ್ಲಾ ಗೊಂದಲಗಳಿಗೆ ಕಾಂಗ್ರೆಸ್ ತೆರೆ ಎಳೆದಿತ್ತು.
ಕಾಂಗ್ರೆಸ್ ಚುನಾವಣೆಯ ಉಸ್ತುವಾರಿಯನ್ನು ಈ ರೀತಿಯಾಗಿ ಹಂಚಿಕೆ ಮಾಡಿದೆ.
ಕೃಷ್ಣಭೈರೈಗೌಡ-ಬಳ್ಳಾರಿ ಗ್ರಾಮೀಣ
ಎನ್.ಎಚ್.ಶಿವಶಂಕರ ರೆಡ್ಡಿ-ಹಗರಿಬೊಮ್ಮನಹಳ್ಳಿ
ರಮೇಶ್ ಜಾರಕಿಹೊಳಿ-ಕೂಡ್ಲಿಗಿ
ಪ್ರಿಯಾಂಕ್ ಖರ್ಗೆ-ಸಂಡೂರು
ಯು.ಟಿ.ಖಾದರ್-ಬಳ್ಳಾರಿ ನಗರ
ರಾಜಶೇಖರ್ ಬಿ ಪಾಟೀಲ್-ಹೂವಿನ ಹಡಗಲಿ
ಡಾ.ಶರಣಪ್ರಕಾಶ್ ಪಾಟೀಲ್-ವಿಜಯನಗರ
ಆರ್.ಧ್ರುವನಾರಾಯಣ- ಕಂಪ್ಲಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv