– ಮತಗಟ್ಟೆಯಲ್ಲಿ ಮೊದಲ ವೋಟ್ ಮಾಡಿದ 70ರ ವೃದ್ಧ
ಹಾವೇರಿ: ಶಿಗ್ಗಾಂವಿ ಉಪಚುನಾವಣೆಗೆ (Shiggon Bypoll) ಬೆಳಗ್ಗೆಯಿಂದಲೇ ಮತದಾನ ಬಿರುಸುಗೊಂಡಿದ್ದು, ಕುರುಬ ಸಮಾಜದ ವಯೋವೃದ್ಧರೊಬ್ಬರು ಮೊದಲ ಮತದಾನ ಚಲಾಯಿಸಿದ್ದಾರೆ.
ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗಿ ಬರಲಿ ಎಂದು ಪೂಜೆ ಮಾಡಿ 70ರ ಹರೆಯದ ತಿರಕಪ್ಪ ಚಾಕಾಪುರ ಬಳಿಕ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡಿದ್ದಾರೆ.
ಕುರುಬರ ಮೊದಲ ಮತದಾನದಿಂದ ಒಳ್ಳೆಯ ಸುದ್ದಿ ಭರವಸೆ ಹಿನ್ನೆಲೆಯಲ್ಲಿ ಹಾಲುಮತದ ಹಿರಿಯರಾದ ಶಿಗ್ಗಾಂವಿಯ ಖಾಜೇಖಾರ್ ಓಣಿಯ ತಿರಕಪ್ಪ ಅವರು ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿದರು. ಶಿಗ್ಗಾಂವಿಯ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ ನಂ.1 ರಲ್ಲಿ ಮತದಾನ ಮಾಡಿದರು.
ಶಿಗ್ಗಾವಿ (Shiggaon) ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. 2008, 2013, 2018 ಹಾಗೂ 2023ರ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.