ಗದಗ: (Gadag) ಮದ್ಯ ಪ್ರಿಯರು ತಮ್ಮ ಗ್ರಾಮಕ್ಕೆ ಬಾರ್ (Bar) ಬೇಕೆಂದು ತಹಶೀಲ್ದಾರ್‌ಗೆ ಬೇಡಿಕೆ ಇಟ್ಟ ಘಟನೆ ಜಿಲ್ಲೆ ರೋಣ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ʻಅಧಿಕಾರಿಗಳ ನಡೆ ಹಳ್ಳಿ ಕಡೆʼ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಈ ವೇಳೆ ಕುರಹಟ್ಟಿ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಎರಡರಿಂದ ಮೂರು ಬಾರ್ ಕಲ್ಪಿಸಿಕೊಡಿ ಅಂತ ರೋಣ ತಹಶೀಲ್ದಾರ್ ವಾಣಿ ಉಂಕಿ ಅವರಿಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: 1 ರೂ.ಗೆ ಲೀಸ್ ಪಡೆದಿದ್ದ ಅವಧಿ ಮುಕ್ತಾಯ – ಜಾಗ ಬಿಟ್ಟುಕೊಡುವಂತೆ ಕೇಳಿದ ದೇವಸ್ಥಾನ ಮಂಡಳಿ
Advertisement
Advertisement
ಕಾರಣ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸಾಯಂಕಾಲ, ರಾತ್ರಿ ವೇಳೆ ಮಹಿಳೆಯರು ನಿರ್ಭಯವಾಗಿ ಓಡಾಡಲಾಗ್ತಿಲ್ಲ. ಹಾಗಾಗಿ ನಮ್ಮ ಗ್ರಾಮದಲ್ಲಿ ಸುಮಾರು 700 ಜನ ಮದ್ಯ ಪ್ರಿಯರಿದ್ದಾರೆ. ಅವರಿಗೆ ಅಧಿಕೃತವಾಗಿ 2 ರಿಂದ 3 ಬಾರ್ ಓಪನ್ ಮಾಡಿಕೊಡಿ. ಇಲ್ಲವೆ ಕುಡಿತದಿಂದ ಮೃತಪಟ್ಟ ಕುಟುಂಬಕ್ಕೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಮಾಸಾಶನ ಆದ್ರೂ ನೀಡಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ವಿನಂತಿಸಿದ್ದಾರೆ.
Advertisement
Advertisement
ಈ ಸಂಬಂಧ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆಲ್ಲಾ ಮುಜುಗರ ಉಂಟುಮಾಡಿತು. ಇದನ್ನೂ ಓದಿ: ವೋಟರ್ ಡೇಟಾ ಹಗರಣ ಆರೋಪ – ಕಾಂಗ್ರೆಸ್ ವಿರುದ್ಧ ರಾಜ್ಯ ಮುಖ್ಯಚುನಾವಣಾಧಿಕಾರಿಗೆ ಬಿಜೆಪಿ ದೂರು