ಮಂಗಳೂರು: ದೈವ ದೇವಾಲಯಗಳ ತವರು ಕರಾವಳಿಯಲ್ಲಿ ಹಲವು ದೈವ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿವೆ. ಇವುಗಳ ಪೈಕಿ ಮಂಗಳೂರು ತಾಲೂಕಿನ ಅಂಚಿನಲ್ಲಿರುವ, ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳ ನಡುವೆ ಹರಿಯುವ ಪವಿತ್ರವಾದ ಪಲ್ಗುಣಿ ನದಿಯಿಂದ ಕೆಲವು ಮೀಟರ್ ದೂರದಲ್ಲಿರುವ ಕುಪ್ಪೆಪದವು ಪೇಟೆಯ ಹೃದಯಭಾಗದಲ್ಲಿ ನೆಲೆಸಿರುವ, ನಂಬಿ ಶರಣಾಗಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ವಾತ್ಸಲ್ಯಮಯಿ ಶ್ರೀದುರ್ಗೇಶ್ವರೀ ದೇವಿಯ ಕ್ಷೇತ್ರವೂ ಒಂದು.
Advertisement
ಕ್ಷೇತ್ರದ ಆರಾಧ್ಯ ಮಂಗಳ ಮೂರ್ತಿಗೆ ಫೆಬ್ರವರಿ 12ರ ಭಾನುವಾರ ಮುಂಜಾನೆ ಪವಿತ್ರ ಬ್ರಹ್ಮಕಲಶೋತ್ಸವ ನೆರವೇರಲಿದೆ. ಕುಪ್ಪೆಪದವು ಶ್ರೀ ದುರ್ಗೇಶ್ವರೀ ದೇವಿಯ ಸಾನಿಧ್ಯ ಇರುವ ಸ್ಥಳದಲ್ಲಿ ಮುರಾತನ ಕಾಲದಿಂದ ರಾಮಾಯಣ, ಮಹಾಭಾರತ ಅಲ್ಲದೇ 7 ದಿನಗಳ ಸಂಪೂರ್ಣ ದೇವಿ ಮಹಾತ್ಮೆ ಸಹಿತ ಇತರ ಪೌರಾಣಿಕ ಯಕ್ಷಗಾನ ಬಯಲಾಟಗಳು ಪ್ರದರ್ಶನಗೊಂಡ ರಂಗಸ್ಥಳದಲ್ಲಿ ಶ್ರೀದುರ್ಗೇಶ್ವರೀಯ ದಿವ್ಯ ಸಾನಿಧ್ಯ ಇರುವ ಬಗ್ಗೆ ದೈವಜ್ಞರ ಚಿಂತನಾ ಪ್ರಶ್ನೆಯಲ್ಲಿ ಕಂಡುಬ೦ದ ಹಿನ್ನಲೆಯಲ್ಲಿ, ಪೇಜಾವರ ಮಠಾಧೀಶ ದಿ| ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರಿಂದ ಶಿಲಾನ್ಯಾಸ ನೆರವೇರಿತ್ತು. ನಂತರ ದೇವಸ್ಥಾನ ನಿರ್ಮಾಣವಾಗಿ 1973-74 ರಲ್ಲಿ ಶ್ರೀದುರ್ಗೇಶ್ವರಿ ದೇವಿಯ ಪ್ರತಿಷ್ಠೆ ನಡೆದು ಬ್ರಹ್ಮಕಲಶೋತ್ಸವ ನಡೆದಿತ್ತು. ಇದನ್ನೂ ಓದಿ: ವಿವಾದಾತ್ಮಕ ಭಾಷಣ – ಶರಣ್ ಪಂಪ್‌ವೆಲ್ ವಿರುದ್ಧ FIR ದಾಖಲು
Advertisement
Advertisement
ಅಂದು ನಿರ್ಮಾಣವಾಗಿದ್ದ ದೇವಾಲಯ ಜೀರ್ಣಾವಸ್ಥೆ ತಲುಪಿದ್ದ ಹಿನ್ನಲೆಯಲ್ಲಿ ದೈವಜ್ಞ ವೇದಮೂರ್ತಿ ಪಂಜ ಭಾಸ್ಕರ ಭಟ್ ಅವರ ಸೂಚನೆಯನ್ವಯ, ಸೋಲೂರು ಆರ್ಯ-ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ದಾರ ಸಮಿತಿ ರಚಿಸಿ, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತರು ತೀರ್ಮಾಣಿಸಿದಂತೆ ತೀರ್ಥ ಮಂಟಪ ಮತ್ತು ನೂತನ ಶಿಲಾಮಯ ಗರ್ಭಗೃಹ, ಗಣಪತಿ ಗುಡಿ, ಕೊಡಮಣಿತ್ತಾಯ ದೈವಸ್ಥಾನ,ಮತ್ತು ನಾಗಸನ್ನಿಧಿಯ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಸುಂದರವಾದ ದೇವಳದಲ್ಲಿ ಮಾತೆ ದುರ್ಗೆಯ ಪುನಃ ಪ್ರತಿಷ್ಠೆಗೆ ದಿನಗಣನೆ ಪ್ರಾರಂಭವಾಗಿದೆ. ಶ್ರೀದುರ್ಗೇಶ್ವರಿಯ ಇಚ್ಛೆಯಂತೆ, ಭಕ್ತರ ಸಹಕಾರದಿಂದ ಸುಂದರವಾದ ಶಿಲಾಮಯ ನೂತನ ದೇವಾಲಯ ನಿರ್ಮಾಣವಾಗಿದೆ. ಇದನ್ನೂ ಓದಿ: ಮೊಬೈಲ್ ನೋಡಲು ಬಿಡಲಿಲ್ಲವೆಂದು ಮನೆಯಲ್ಲೇ ನೇಣು ಬಿಗಿದು ಬಾಲಕ ಆತ್ಮಹತ್ಯೆ
Advertisement
ಕ್ಷೇತ್ರದ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ಫೆಬ್ರವರಿ 7ರ ಮಂಗಳವಾರದಿಂದ ಪ್ರಾರಂಭಗೊಂಡು 12ರ ಭಾನುವಾರದವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಂಧರ್ಭದಲ್ಲಿ ಆಗಮಿಸುವ ಭಕ್ತರನ್ನು ಸ್ವಾಗತಿಸಲು ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಸರ್ವರೀತಿಯ ಸಿದ್ಧತೆಗಳು ನಡೆಯುತ್ತಿವೆ. ಸುಸಜ್ಜಿತ ಪಾಕಶಾಲೆ, ಉಗ್ರಾಣ, ಸಭಾ ವೇದಿಕೆ, ಅನ್ನಛತ್ರದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬ್ರಹ್ಮಕಲಶೋತ್ಸವದಂದು ಸುಮಾರು 5 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಮೂಲಕ ಮತ್ತೊಂದು ಕ್ಷೇತ್ರವು ಲೋಕಮುಖಕ್ಕೆ ಪರಿಚಯವಾಗಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k