ಬೆಂಗಳೂರು: 2028ರಲ್ಲಿ ನಮ್ಮ ಸರ್ಕಾರ ಬಂದರೆ 2000 ರೂ. ಇರುವ ಗೃಹಲಕ್ಷ್ಮಿ ಹಣವನ್ನ 4,000 ರೂ.ಗೆ ಏರಿಸುತ್ತೇವೆ ಎಂದು ಶಾಸಕ ಕುಣಿಗಲ್ ರಂಗನಾಥ್ (Kunigal Ranganath) ಹೇಳಿದರು.
ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಪದಗ್ರಹಣ ಮಾಡಿದ ದಿನವೇ ನಾನು ಹೇಗಾದರೂ ಬಡವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದರು. ಗೃಹಲಕ್ಷ್ಮಿಯು ವಿಶೇಷವಾದ ಹಣಕಾಸು ಯೋಜನೆಯಾಗಿದೆ. ಇವತ್ತು ಬಹಳಷ್ಟು ಜನರು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಾರೆ. 2000 ರೂ ಏನಾಗುತ್ತೆ? 2,000ದಲ್ಲಿ ಏನು ಬದಲಾಗುತ್ತದೆ. ಈ ಬದಲಾವಣೆಯನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದರು. ಇದನ್ನೂ ಓದಿ: ಕಲುಷಿತ ಆಹಾರ ಸೇವನೆ ಕೇಸ್ | ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿ – ಮಂಡ್ಯ ಡಿಸಿ
ಹಳ್ಳಿಯಲ್ಲಿ ಇರುವವರಿಗೆ ಇನ್ನೂ 5,000 ಮನೆಗಳನ್ನು ಕೊಡಿಸಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಕೆಲವು ಕುಟುಂಬಗಳು ಗುಡಿಸಲಲ್ಲಿ ವಾಸಮಾಡುತ್ತಿದ್ದಾರೆ. 24,000 ಸಾವಿರ ರೂ. ಪ್ರತಿ ವರ್ಷ ಕೊಟ್ಟರೇ ಆ ಬದುಕಿನ ಬದಲಾವಣೆಯ ಬೆಳಕನ್ನು ನೋಡಬೇಕು ಅಂದರೆ ಬೆಂಗಳೂರಲ್ಲಿ ಇರೋರು ಬಂದು ನೋಡಬೇಕು ಎಂದು ನುಡಿದರು. ಇದನ್ನೂ ಓದಿ: ಕರ್ನಾಟಕದ ಶಾಸಕರಿಗೆ ತಿರುಪತಿಯಲ್ಲಿ ದರ್ಶನ ಭಾಗ್ಯ ಕೊಡಿಸಿ: ಟಿ.ಎ.ಶರವಣ ಮನವಿ
ದಯವಿಟ್ಟು ಗ್ಯಾರಂಟಿ ಸ್ಕೀಂ ಗೃಹಲಕ್ಷ್ಮಿ ಬಗ್ಗೆ ಯಾರಾದರು ವಿರೋಧ ಮಾಡಿದರೆ ಆ ಶಾಪ ತಟ್ಟುತ್ತದೆ ಎಂದು ಹೇಳಲು ಇಚ್ಛೆ ಪಡುತ್ತೇನೆ. ಇವತ್ತು ನಾನು ಚಾಲೆಂಜ್ ಹಾಕುತ್ತಿದ್ದೇನೆ. ಮುಂದಿನ ಸರ್ಕಾರ ಯಾವುದೇ ಬದಲಾವಣೆ ಆದರೂ ಯಾರೂ ಗ್ಯಾರೆಂಟಿ ಸ್ಕೀಂ ನಿಲ್ಲಸಲು ಆಗುವುದಿಲ್ಲ. ಮುಂದಿನ ಸಾಲಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಾಪಾಸ್ ಅಧಿಕಾರಕ್ಕೆ ಬಂದರೆ 2000 ರೂ. ಅನ್ನು 4000 ರೂ.ಗೆ ಏರಿಕೆ ಮಾಡಲು ನಾವು ತಯರಾಗುತ್ತೇವೆ ಎಂದರು. ಇದನ್ನೂ ಓದಿ: ಕೋಲಾರ| ಕುಡಿಯಲು ಹಣ ನೀಡದ ಚಿಕ್ಕಮ್ಮ – ಬಿಯರ್ ಬಾಟಲಿಯಿಂದ ತಿವಿದು ಕೊಲೆ ಯತ್ನ