ಅತ್ಯಂತ ನಿರೀಕ್ಷೆಯ ಹಾಸ್ಯದ ಸಾಹಸ ‘ಕುಂಗ್ ಫು ಪಾಂಡಾ- 4’ (Kung Fu Panda -4) ಅನ್ನು ಜುಲೈ 15ರಂದು ಪ್ರಸಾರ ಮಾಡಲು ಸಜ್ಜಾಗಿದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠಿ ಮತ್ತು ಬಂಗಾಳಿ ಒಳಗೊಂಡು ಆರಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ಡ್ರ‍್ಯಾಗನ್ ವಾರಿಯರ್ ಕೂಡಾ ಜಿಯೊ ಸಿನಿಮಾ ಪ್ರೀಮಿಯಂನಲ್ಲಿ ವೀಕ್ಷಕರನ್ನು ಅವರ ಆಯ್ಕೆಯ ಭಾಷೆಯಲ್ಲಿ ಸೆಳೆಯಲು ಸಜ್ಜಾಗಿದೆ.
ಇದು ಅತ್ಯಂತ ನಿರೀಕ್ಷೆಯ ಸಾಹಸವಾಗಿದ್ದು ಇದರಲ್ಲಿ ಪೊ (ಜಾಕ್ ಬ್ಲಾಕ್ ಧ್ವನಿ) ಹೊಸ ಡ್ರ‍್ಯಾಗನ್ ವಾರಿಯರ್ ಹುಡುಕಾಟದ ಅತ್ಯಂತ ಕಠಿಣ ಸವಾಲನ್ನು ಎದುರಿಸುತ್ತಾನೆ. ಆದಾಗ್ಯೂ ಯಶಸ್ಸಿಗೆ ಅವರ ಪ್ರಯತ್ನಕ್ಕೆ ಮೋಸ ಮಾಡುವ ಖಳ ದಿ ಚಮೇಲಿಯನ್ (ವಯೊಲಾ ಡೇವಿಸ್ ಧ್ವನಿ)ಯಿಂದ ಅನಿರೀಕ್ಷಿತ ತಿರುವು ತೆಗೆದಿಕೊಳ್ಳುತ್ತದೆ. ಆತ ಅವರ ವಿಶ್ವದ ಸಮತೋಲನಕ್ಕೆ ಕಂಟಕ ತರುತ್ತಾನೆ. ಪೊ ಜಾಣ್ಮೆಯ ನರಿ ಝೆನ್ (ಅವ್ಕ್ವಫಿನಾ) ಜೊತೆಯಲ್ಲಿ ಸೇರಿಕೊಂಡಾಗ ಚಮೇಲಿಯನ್ ಕೆಟ್ಟ ಯೋಜನೆಗಳು ತಲೆಕೆಳಗಾಗುತ್ತವೆ.
ಮೈಕ್ ಮಿಷೆಲ್ ಮತ್ತು ಸ್ಟೀಫನಿ ಸ್ಟೈನ್ ನಿರ್ದೇಶನದ ಈ ಅನಿಮೇಟೆಡ್ ಮಾಸ್ಟರ್ ಪೀಸ್ ಜಾಕ್ ಬ್ಲಾಕ್, ಡಸ್ಟಿನ್ ಹಾಫ್ ಮನ್ (ಶಿರ್ಫು), ಜೇಮ್ಸ್ ಹಾಂಗ್ (ಲಿ ಶಾನ್), ಮತ್ತು ಕ್ರೇನ್ಸ್ ಟನ್ (ಮಿ.ಪಿಂಗ್) ಅವರ ಧ್ವನಿಗಳು ಮರಳಿರುವುದನ್ನು ಕಾಣುತ್ತಿದ್ದು ಅದು ಅತ್ಯಂತ ಪ್ರೀತಿ ಪಾತ್ರ ಕುಂಗ್ ಫು ಪಾಂಡಾ ಕಥೆಯ ತಡೆರಹಿತ ಮುಂದುವರಿಕೆ ದೃಢಪಡಿಸುತ್ತಾರೆ. ಈ ಚಲನಚಿತ್ರವು ಧೈರ್ಯ, ಗೆಳೆತನ ಮತ್ತು ಸ್ವಯಂ-ಆವಿಷ್ಕಾರದ ವಸ್ತುಗಳನ್ನು ನೇಯ್ದಿದ್ದು ನಾಯಕತ್ವದ ನೈಜ ಅಂತಃಸ್ಸತ್ವವನ್ನು ಅತ್ಯಂತ ಸಂಕಷ್ಟದ ಸನ್ನಿವೇಶಗಳಲ್ಲೂ ಪ್ರದರ್ಶಿಸುತ್ತದೆ. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ: ‘ಡಿ’ ಗ್ಯಾಂಗ್ ವಿರುದ್ಧ 200 ಗಡಿ ದಾಟಿದ ಸಾಕ್ಷಿಗಳು
ಹೊಸದಾಗಿ ಬಿಡುಗಡೆಯಾದ ‘ಕುಂಗ್ ಫು ಪಾಂಡಾ’ 4ರೊಂದಿಗೆ ಜಿಯೊಸಿನಿಮಾ ಪ್ರೀಮಿಯಂ 4ಕೆ ಗುಣಮಟ್ಟದವರೆಗೆ ಜಾಹೀರಾತು ಮುಕ್ತ ಅನುಭವ ಮತ್ತು ಆಫ್ ಲೈನ್ ವೀಕ್ಷಣೆಯ ಆಯ್ಕೆಗಳನ್ನು ಎಲ್ಲವೂ ತಿಂಗಳಿಗೆ ರೂ.29ರಲ್ಲಿ ನೀಡುತ್ತದೆ.
ನಿಮ್ಮ ಕ್ಯಾಲೆಂಡರ್‌ಗಳಲ್ಲಿ ಗುರುತು ಹಾಕಿಕೊಳ್ಳಿ ಮತ್ತು ಸಾಹಸ ತುಂಬಿದ ದಿಟ್ಟ ಆ್ಯಕ್ಷನ್ ಹಾಗೂ ಹೃದಯಂಗಮ ಕಥೆಯನ್ನು ನಿಮ್ಮದೇ ಭಾಷೆಯಲ್ಲಿ ಕುಂಗ್ ಫು ಪಾಂಡಾ 4ರಲ್ಲಿ ಜುಲೈ 15ರಿಂದ ಪ್ರಸಾರವಾಗಲಿದೆ.