ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ವಿರುದ್ಧ ವಂಚನೆ ಆರೋಪ – ಕೋರ್ಟ್‌ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ

Public TV
0 Min Read
jayaprakash shet

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಿಜೆಪಿ ತಾಲೂಕಿನ ಮಹಿಳಾ ಮೋರ್ಚ ಅಧ್ಯಕ್ಷೆ ಹಾಗೂ ಶಾಸಕ ದಿನಕರ್ ಶಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಯಪ್ರಕಾಶ್ ಶೇಟ್ ವಿರುದ್ಧ ಕುಮಟಾ ಜೆಎಂಎಫ್‌ಸಿ ಕೋರ್ಟ್‌ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.

1.90 ಲಕ್ಷ ಹಣ ವಂಚನೆ ಆರೋಪದಡಿ 2024 ಡಿ.26 ರಂದು ಪ್ರಕರಣ ದಾಖಲಿಸಿದ್ದ ಕುಮಟಾ ಕಿಂಗ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಚೆಕ್ ನೀಡಿ ವಂಚನೆ ಮಾಡಿರುವ ಕುರಿತು ಕಲಂ 223 ,138 NI Act ನಡಿ ಪ್ರಕರಣ ದಾಖಲಿಸಿತ್ತು.

Share This Article