ಚಿಕ್ಕಬಳ್ಳಾಪುರ: ಹೊಸ ವರ್ಷದಂದು ವಿನೂತನವಾಗಿ ಕುಂಭಕರ್ಣ (Kumbhakarna) ವೇಷ ಧರಿಸಿ ಶಾಸಕ ಹಾಗೂ ಸಚಿವರಿಗೆ ವಿನೂತನವಾಗಿ ಮನವಿ ಪತ್ರ ಸಲ್ಲಿಸುವ ಮೂಲಕ ಯುವ ಸಂಚಲನ ತಂಡದ ಸದಸ್ಯರು ಗಮನ ಸೆಳೆದಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
Advertisement
ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಹಲವು ಸಮಸ್ಯೆಗಳನ್ನ ಕಳೆದ 2 ವರ್ಷಗಳಿಂದ ಶಾಸಕರು, ಸಚಿವರು, ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದ್ರೆ ವಾಸ್ತವವಾಗಿ ಯಾವುದೇ ಸಮಸ್ಯೆಗಳನ್ನು ಸರಿಪಡಿಸುವ ಕೆಲಸವಾಗಿಲ್ಲ. ನಮ್ಮ ಸಮಸ್ಯೆಗಳು ಮತ್ತೊಮ್ಮೆ ಹೊಸ ವರ್ಷದ ಮೊದಲ ದಿನ ಜನಪ್ರತಿನಿಧಿಗಳಿಗೆ ಗೊತ್ತಾಗಲಿ ಅಂತ ಯುವ ಸಂಚಲನ ಸಂಘಟನೆಯ ಸದಸ್ಯರು ಮನವಿ ಪತ್ರ ಸಲ್ಲಿಸಿದ್ದಾರೆ.
Advertisement
ಬೆಂಗಳೂರು ಗ್ರಾಮಾಂತರ ಜಿಲ್ಲಾಢಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪನವರಿಗೆ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಇದನ್ನೂ ಓದಿ: ಸಚಿನ್ ಪಾಂಚಾಳ್ ಸಾವಿಗೆ ನೀವು ಹೊಣೆಯಾಗಬಹುದಲ್ಲವೇ: ಪ್ರಿಯಾಂಕ್ ಖರ್ಗೆಗೆ ಸಿ.ಟಿ ರವಿ ಪ್ರಶ್ನೆ
Advertisement
Advertisement
ಕುಂಭಕರ್ಣ ನಿದ್ದೆಯಲ್ಲಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸಮಸ್ಯೆ ಬಗೆಹರಿಸಲಿ ಅಂತ ಕುಂಭಕರ್ಣ ವೇಷ ಧರಿಸಿ ಮನವಿ ಸಲ್ಲಿಸಲಾಗಿದೆ ಅಂತ ತಂಡದ ಸದಸ್ಯ ಚಿದಾನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಕೋಲಾರ ಗಡಿಯಲ್ಲಿ ಮುಂದುವರೆದ ಕಾಡಾನೆ ಉಪಟಳ – ಅಪಾರ ಪ್ರಮಾಣದ ಬೆಳೆಗಳು ನಾಶ